ಕರ್ನಾಟಕ (Karnataka) ವು ನವೀಕರಿಸಬಹುದಾದ ಇಂಧನವನ್ನು ಅತೀ ಹೆಚ್ಚು ಉತ್ಪಾದಿಸುತ್ತಿದೆ. 15 ಸಾವಿರ ಮೆಗಾವಾಟ್ ವಿದ್ಯುತ್ ಪರಿಸರ ಸ್ನೇಹಿ ವಿಧಾನಗಳಲ್ಲಿ ಉತ್ಪಾದನೆಯಾಗುತ್ತಿದೆ. ಒಟ್ಟು ವಿದ್ಯುತ್ (Electricity) ಉತ್ಪಾದನೆಯ ಅರ್ಧದಷ್ಟು ಪರಿಸರ ಸ್ನೇಹಿ ವಿಧಾನದಲ್ಲಿಯೇ ಉತ್ಪಾದನೆಯಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ (Bommai) ಹೇಳಿದ್ದಾರೆ.
Hon'ble Prime Minister Shri @NarendraModi ji Inaugurates "India Energy Week – 2023", Bengaluru. https://t.co/KODMx1hBRB
— Basavaraj S Bommai (@BSBommai) February 6, 2023
ಭಾರತದಲ್ಲಿ ಅತಿ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು ಕರ್ನಾಟಕದಲ್ಲಿವೆ. ನವೀಕರಿಸಬಹುದಾದ ಇಂಧನವನ್ನು (Renewable Energy) ಕರ್ನಾಟಕವೇ ಅತಿ ಹೆಚ್ಚು ಉತ್ಪಾದಿಸುತ್ತಿದೆ. ನಮ್ಮ ದೇಶದ ಇವಿ ರಾಜಧಾನಿಯಾಗಿ ಕರ್ನಾಟಕವೇ ಹೊರಹೊಮ್ಮಿದೆ. ನೆಲಮಂಗಲ ಬಳಿ ಮಾದಾವರದಲ್ಲಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಮಾತನಾಡಿದ ಸಿಎಂ ಕರ್ನಾಟಕವು ನವೀಕರಿಸಬಹುದಾದ ಇಂಧನವನ್ನು ಅತಿಹೆಚ್ಚು ಉತ್ಪಾದಿಸುತ್ತಿದೆ. 15 ಸಾವಿರ ಮೆಗಾವಾಟ್ ವಿದ್ಯುತ್ ಪರಿಸರ ಸ್ನೇಹಿ ವಿಧಾನಗಳಲ್ಲಿ ಉತ್ಪಾದನೆಯಾಗುತ್ತಿದೆ. ಇದನ್ನೂ ಓದಿ : – ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಅದಾನಿ ವಿರೋಧಿ ಘೋಷಣೆ- ಉಭಯ ಸದನಗಳು ಮುಂದೂಡಿಕೆ
ಒಟ್ಟು ವಿದ್ಯುತ್ ಉತ್ಪಾದನೆಯ ಅರ್ಧದಷ್ಟು ಪರಿಸರ ಸ್ನೇಹಿ ವಿಧಾನದಲ್ಲಿಯೇ ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸರ ಇಂಧನಗಳ ಹೊಸ ಅವತಾರಗಳಿಗೆ ಕರ್ನಾಟಕ ತೆರೆದುಕೊಳ್ಳಲಿದೆ. ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಗೆ ವಿಶೇಷ ಒತ್ತು ಸಿಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ : – ಬೆಂಗಳೂರು ತಂತ್ರಜ್ಞಾನದ ಹಬ್ ಆಗಿದೆ – ಭಾರತದ ಆರ್ಥಿಕತೆಯನ್ನ ಕೊಂಡಾಡಿದ ಪ್ರಧಾನಿ ಮೋದಿ