ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಮೊದಲ ಬಲಿ ಆಗಿದೆ. ಬೊಮ್ಮಾಯಿ ಸರ್ಕಾರ ಯಾವ ಮಟ್ಟದ ಭ್ರಷ್ಟಾಚಾರ ಮಾಡುತ್ತಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸಿಂಗ್ ಸುರ್ಜೇವಾಲ (Randeepsingh Surjevala) ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಕಮಿಷನ್ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಸಂತೋಷ್ ಪಾಟೀಲ್ (Santhosh pateel ) ಎವಿಡೆನ್ಸ್ ಕೊಟ್ಟಿದ್ದಾರೆ. ಡೆತ್‌ನೋಟ್ ಬರೆದು ಸೂಸೈಡ್ (Sucide) ಮಾಡಿಕೊಂಡಿದ್ದಾರೆ. ಇದನ್ನುಓದಿ – ಈಶ್ವರಪ್ಪ ಹೆಸರು ಬರೆದಿಟ್ಟು ಉಡುಪಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ
ಜಡ್ಜ್ ಗಳು ಇದರ ಬಗ್ಗೆ ಗಮನಿಸಿ ಸ್ವಯಂ ದೂರು ದಾಖಲಿಸಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಮೀತ್ ಶಾ (Amith sha) ಈಶ್ವರಪ್ಪ (Eshwarappa) ಮೇಲೆ ಕ್ರಮ ತೆಗೆದುಕೊಳ್ಳಲಿ. ಕಾನೂನು ಪ್ರಕಾರ ಈಶ್ವರಪ್ಪ ಮೇಲೆ ಕ್ರಮ ಆಗಬೇಕು. ಮೊದಲು ಈಶ್ವರಪ್ಪ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನುಓದಿ – ರಾಜ್ಯಕ್ಕೆ ಕನ್ನಡಿಗರ ಬಹುಮತದ ಸರ್ಕಾರದ ಬೇಕು – ಮಾಜಿ ಸಿಎಂ ಹೆಚ್ಡಿಕೆ
ಸಿಎಂ ಬೊಮ್ಮಾಯಿ ಈಶ್ವರಪ್ಪ ಅವರನ್ನ ರಕ್ಷಣೆ ಮಾಡಬಾರದು. ಮೋದಿ ಇದರ ಬಗ್ಗೆ ಏನ್ ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ. ನಾ ಕಾವುಂಗಾ, ನಾ ಕಾನೆದೊಂಗಾ ಅಂತಾರೆ. ಮೊದಲು ಮೋದಿ ಈ ಭ್ರಷ್ಟಾಚಾರ ಗಮನಿಸಲಿ. ಕಾಂಗ್ರೆಸ್ ಈ ಘಟನೆ ಬಗ್ಗೆ ಬಗ್ಗೆ ಸುಮ್ಮನೆ ಇರಲ್ಲ. ಗಂಭೀರವಾಗಿ ಧ್ವನಿ ಎತ್ತುತ್ತೇವೆ ಎಂದು ಸುರ್ಜೇವಾಲ ಹೇಳಿದ್ದಾರೆ.