ನ್ಯಾಷನಲ್ ಹೆರಾಲ್ಡ್ (National herald) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಬಾರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul gandhi) ಇಂದು ವಿಚಾರಣೆಗೆ ಹಾಜರಾದರು.
ಝಡ್ ಪ್ಲಸ್ ಕ್ಯಾಟಗರಿಯ ಸಿಆರ್ ಪಿಎಫ್ ಸೆಕ್ಯೂರಿಟಿ ಎಸ್ಕಾರ್ಟ್ ನೊಂದಿಗೆ ಇಂದು ಬೆಳಗ್ಗೆ 11-05 ರಲ್ಲಿ ಸೆಂಟ್ರಲ್ ದೆಹಲಿಯ (Central delhi) ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ (APJ abdul kalam road) ಇಡಿ ಕೇಂದ್ರ (ED Center) ಕಚೇರಿಗೆ 51 ವರ್ಷದ ರಾಹುಲ್ ಗಾಂಧಿ ಆಗಮಿಸಿದರು. ಕಳೆದ ವಾರದಿಂದ ಈ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಯಾಗಿದ್ದರೂ ಇಡಿ ಕಚೇರಿ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಅರೆಸೇನಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದನ್ನು ಓದಿ :- ಅಗ್ನಿವೀರರಿಗೆ ಬಿಗ್ ಆಫರ್ ಕೊಟ್ರು ಆನಂದ್ ಮಹೀಂದ್ರಾ..!