ಗೋಪಾಲಸ್ವಾಮಿ (Gopalswami ) ಆನೆ (Elephant) ಸಾವಿಗೆ ಸಿಎಂ ಬೊಮ್ಮಾಯಿ (Bommai) ಸಂತಾಪ ಸೂಚಿಸಿದ್ದಾರೆ. ಗೋಪಾಲಸ್ವಾಮಿ ಆನೆ ಸಾವು ಬಹಳ ಬೇಸರ ತಂದಿದೆ ಇಂದು ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕಾಡಾನೆ ದಾಳಿಗೆ ಗೋಪಾಲಸ್ವಾಮಿ(39) ಆನೆ ಸಾವನ್ನಪ್ಪಿದೆ.
ಮೇಯುವ ಸಲುವಾಗಿ ನೇರಳಕುಪ್ಪೆ ಬಿ’ ಹಾಡಿಯ ಕ್ಯಾಂಪ್‌ನಲ್ಲಿ ಬಿಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆನೆ ಸಾವನ್ನಪ್ಪಿದೆ. ಮಸ್ತಿಯಲ್ಲಿದ್ದ ಕಾಡಾನೆಯಿಂದ ಗೋಪಾಲಸ್ವಾಮಿ ಮೇಲೆ ದಾಳಿ ನಡೆದಿದೆ.
ಕಾದಾಟದಲ್ಲಿದ್ದ ಕಾಡಾನೆಯನ್ನು ಹಿಮ್ಮೆಟ್ಟಿಸಲು ಮಾವುತ, ಅರಣ್ಯ ಸಿಬ್ಬಂದಿ ಪ್ರಯತ್ನಪಟ್ಟಿದ್ದರು. ಅಭಿಮನ್ಯು ಸ್ಥಾನ ತುಂಬಬೇಕಿದ್ದ ಗೋಪಾಲಸ್ವಾಮಿ 2012ರಿಂದ ದಸರ ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ 39 ವರ್ಷದ ಗೋಪಾಲಸ್ವಾಮಿ ಇನ್ನು ನೆನಪು ಮಾತ್ರ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಾನೆಗಳ ಕಾದಾಟದ ಸಮಯದಲ್ಲಿ ಗೋಪಾಲಸ್ವಾಮಿ ಮುಂಗಾಲಿನ ಮೂಳೆ ಮುರಿದಿತ್ತು .
ಚಿಕಿತ್ಸೆ ಸಕಾಲದಲ್ಲಿ ನೀಡಲಾಗಿದ್ದರೂ ಗೋಪಾಲಸ್ವಾಮಿ ಸ್ಪಂದಿಸಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ . ಮೂರು ವರ್ಷದ ನಂತರ ಅಭಿಮನ್ಯು (67) ಆನೆ ಅಂಬಾರಿ ಹೊರುವಂತೆ ಇರಲಿಲ್ಲ .ಆ ಸ್ಥಾನವನ್ನ ಗೋಪಾಲಸ್ವಾಮಿ ತುಂಬಬೇಕಿತ್ತು. ಆದರೆ ಮುಂದಿನ ದಸರಾದಲ್ಲಿ ಅಂಬಾರಿ ಹೊರುವುದು ಯಾರು ಎಂಬ ಪ್ರಶ್ನೆ ಈಗ ಅರಣ್ಯ ಅಧಿಕಾರಿಗಳಲ್ಲಿ ಮೂಡಿದೆ .
ಇದನ್ನೂ ಓದಿ : – T20 ಏಕದಿನ Ranking ನಲ್ಲಿ ಸೂರ್ಯಕುಮಾರ್ ಟಾಪ್, ಕೊಹ್ಲಿಗೆ ಆರನೇ ಸ್ಥಾನ