ಇನ್ನೇನು ಪರೀಕ್ಷೆ ಬರೆಯಬೇಕು ಎನ್ನುವಾಗ ಹಿಜಾಬ್ ವಿವಾದ ಬೃಹದಾಕಾರದಲ್ಲಿ ಬೆಳೆದಿದೆ. ಪರೀಕ್ಷೆ ಬರೆಯಬೇಡಿ ಎಂದು ಕುಮ್ಮಕ್ಕು ಕೊಡುವವರನ್ನು ನಂಬಬೇಡಿ. ಉದ್ಯೋಗ ಸಿಗದಿದ್ದರೆ ಯಾರೂ ನಿಮ್ಮ ನೆರವಿಗೆ ಬರುವುದಿಲ್ಲ.
ರಾಜಕೀಯ ಲಾಭಕ್ಕೆ ಹಿಜಾಬ್ ವಿವಾದ ಬಳಕೆ ಮಾಡಿಕೊಳ್ಳುವವರ ಬಗ್ಗೆ ಹೆಚ್ಚು ಯೋಚಿಸಬೇಡಿ ಎಂದು ಕೋಲಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಕಣ್ಣಿಗೆ ಕಾಣದ, ಹಿತ ಬಯಸದ, ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಮುಸ್ಲಿಂ ಯುವತಿಯರು ಇವರ ಮಾತಿಗೆ ಕಿವಿಗೊಡಬಾರದು.
ಇದನ್ನು ಓದಿ :- ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಂಗಳೂರಿನಿಂದ ಕೋಲಾರದ ವರೆಗೂ ಸೈಕಲ್ ಜಾಥಾ
ಸೈಕಲ್ ಜಾಥಾ ನೆಪದಲ್ಲಿ ಕೋಲಾರದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಬಂದ ಬಳಿಕ ಕ್ಲಾಕ್ ಟವರ್ನಲ್ಲಿ ಭಾರತದ ಧ್ವಜ ಹಾರಿಸಿದ್ದೇವೆ. ಸೈಕಲ್ ಜಾಥಾದಿಂದ ಆರೋಗ್ಯ ಸುಧಾರಿಸುತ್ತೆ. ಜೆಡಿಎಸ್ ಪಕ್ಷ ಕರ್ನಾಟದಲ್ಲಿ ಕಡೆಯ ಹಂತ ತಲುಪಿದೆ. ಸೈಕಲ್ ಜಾಥಾ ಮಾಡಿರುವ ಉದ್ದೇಶ, ಅವರ ಪಕ್ಷದ ಸಿದ್ಧಾಂತ ಏನು ಎಂಬುದು ಕಾರ್ಯಕರ್ತರಿಗೆ ಗೊತ್ತಿದೆ. ಭಾರತದ ಬಾವುಟ ಹಾರಿಸಿರುವ ಬಗ್ಗೆ ಜೆಡಿಎಸ್ ಪಕ್ಷದವರ ನಿಲುವು ಏನು ಎನ್ನುವುದನ್ನು ತಿಳಿಸಲಿ. ಒಬ್ಬ ಪ್ರಬುದ್ಧ ನಾಯಕ ಈ ರೀತಿ ಹೇಳಿಕೆ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇದನ್ನು ಓದಿ :- ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವೀರೋಚಿತ ಸೋಲು – ಮಹಿಳಾ ವಿಶ್ವಕಪ್ ನಿಂದ ಭಾರತ ಔಟ್