Life Style

ಬಿಜೆಪಿ ಬಿಡುವ ಪ್ರಶ್ನೆ ಇಲ್ಲ – ರಮೇಶ್ ಜಾರಕಿಹೊಳಿ ಸ್ಪಷ್ಟನೆ

ಸಚಿವ ಸ್ಥಾನ ಸಿಗದ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಾವಂತೂ ಕಳೆದ ಎರಡು ತಿಂಗಳಿಂದ ಚುನಾವಣೆ ತಯಾರಿ ಮಾಡುತ್ತಿದ್ದೇವೆ.

ಸಚಿವ ಸ್ಥಾನ ಸಿಗದ ವಿಚಾರಕ್ಕೆ ಬೆಳಗಾವಿ (Belagavi) ಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh jarakiholi) ಪ್ರತಿಕ್ರಿಯೆ ನೀಡಿದ್ದಾರೆ. ನಾವಂತೂ ಕಳೆದ ಎರಡು ತಿಂಗಳಿಂದ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ಮಂತ್ರಿಗಿರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಮಂತ್ರಿ ಮಾಡ್ತಾರೋ ಇಲ್ವೋ ಸಿಎಂ ಅವರಿಗೆ, ವರಿಷ್ಠರಿಗೆ ಬಿಟ್ಟ ವಿಷಯ.

Bharatiya Janata Party - Wikipedia

ವರಿಷ್ಠರು ಏನು ಆದೇಶ ಕೊಡ್ತಾರೆ ಅದರ ಪ್ರಕಾರ ಕೆಲಸ ಮಾಡ್ತೀನಿ. ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಬಿಜೆಪಿಯಲ್ಲೇ ಉಳಿಯುತ್ತೇನೆ. 2023ಕ್ಕೆ ಪಕ್ಷಕ್ಕೆ ಎಷ್ಟು ಸಾಧ್ಯವಿದೆಯೋ ಬೆಳಗಾವಿ ಜಿಲ್ಲೆ, ವರಿಷ್ಠರು ಹೇಳಿದ ಕಡೆ ಕೆಲಸ ಮಾಡಿ ಬಿಜೆಪಿ ಪಕ್ಷ ಪೂರ್ಣ ಬಹುಮತ ತರಲು ಪ್ರಯತ್ನ ಮಾಡ್ತೀನಿ ಎಂದು ಹೇಳಿದ್ರು.

How can you call anyone terrorist without probe?' DK Shivakumar on Mangaluru blast - India Today

ರಮೇಶ್ ಜಾರಕಿಹೊಳಿ ಮಂತ್ರಿಯಾದ್ರೇ ಸಕ್ಕರೆ ಕಾರ್ಖಾನೆಯಲ್ಲಿ ಮಾಡಿದ ಅವ್ಯವಹಾರ ಬಯಲು ಮಾಡ್ತೀವಿ ಎಂಬ ಡಿಕೆಶಿ (Dk.shivakumar) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಮೋಸ್ಟ್ ವೆಲ್ ಕಮ್, ಇದನ್ನ ಸ್ವಾಗತ ಮಾಡ್ತೀನಿ. ಇಷ್ಟು ದಿನ ಯಾಕೆ ಸುಮ್ಮನೆ ಕುಳಿತಿದ್ದರು, ಮಾಡಲಿ. ವಿರೋಧಿಗಳು ಮಾಡೋರೆ ನಾವೇನೂ ಮಾಡಬೇಕು ಮಾಡ್ತೀವಿ. ಕಾನೂನು ಬದ್ಧವಾಗಿ ಸಕ್ಕರೆ ಕಾರ್ಖಾನೆ ನನ್ನ ಮಗ ನಡೆಸುತ್ತಾನೆ. ಕಳೆದ ಆರು ವರ್ಷದಿಂದ ಕಾರ್ಖಾನೆಗೆ ನಾನು ಕಾಲಿಟ್ಟಿಲ್ಲ. ಆ ಫ್ಯಾಕ್ಟರಿ ವ್ಯವಹಾರ ನನ್ನ ಮಗ ನೋಡುತ್ತಾನೆ. ಅವನು ಅದಕ್ಕೆ ಉತ್ತರ ಕೊಡ್ತಾನೆ. ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಉಳಿದವರ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿರುವ ಹಾಗೇ ಯಾರು ಬಿಜೆಪಿ ಪಕ್ಷ ಬಿಡುವುದಿಲ್ಲ. ಬಿಜೆಪಿಯನ್ನು ಇನ್ನೂ ಇಪ್ಪತ್ತು ವರ್ಷ ಅಲುಗಾಡಿಸುವ ಶಕ್ತಿ ಯಾರಿಗೂ ಇಲ್ಲ. ಬಿಜೆಪಿಯಿಂದ ರಾಜ್ಯಕ್ಕೆ ದೇಶಕ್ಕೆ ಹಿತ ಆಗುತ್ತೆ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ

BK Hariprasad: Rajya Sabha Deputy Chairperson elections: Congress fields BK Hariprasad as candidate

ಬಿ.ಕೆ ಹರಿಪ್ರಸಾದ್ (BK.Hariprasad) 17 ಜನ ಶಾಸಕರನ್ನ ವೇಶ್ಯೆಯರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಬಿ.ಕೆ ಹರಿಪ್ರಸಾದ್ ಅಂತಹ ಮನುಷ್ಯ ಅಲ್ಲಾ ಎನೋ ತಪ್ಪಿ ಮಾತಾಡಿರಬೇಕು. ನಾನು ಪೂರ್ಣ ಪ್ರಮಾಣದಲ್ಲಿ ನೋಡಿಲ್ಲ. ನಮ್ಮ ಮಿತ್ರರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದ್ರು.

Former Karnataka minister CM Ibrahim quits Congress, likely to join JD(S) | The News Minute

17ಶಾಸಕರ ಸಿಡಿ ಬಿಡುಗಡೆ ಮಾಡ್ತೀವಿ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM.Ibrahim) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಮಾಡಲಿ ಬಿಡಿ, ಸಿಡಿಗಳನ್ನ ಇಟ್ಟುಕೊಂಡು ಕೂರಬಾರದು. ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಬಹಿರಂಗ ಪಡಿಸಿ. ಇಂತಹ ನೂರು ಸಿಡಿ ಬರಲಿ ಎಲ್ಲಾ ಶಾಸಕರು ಫೈಟ್ ಮಾಡಲು ರೆಡಿ ಇದ್ದಾರೆ. ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಜನರಿಗೆ ರಾಜ್ಯದ ಜನ ಸರಿಯಾಗಿ ಉತ್ತರ ಕೊಡ್ತಾರೆ ಎಂದು ಕಿಡಿ ಕಾರಿದರು. ಇದನ್ನು ಓದಿ :-  ಇಂದು ಕಲಬುರಗಿ ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಪ್ರವಾಸ

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ವಿಚಾರ
ಪ್ರಧಾನಿ ಮೋದಿ (Modi) ಯವರು ಕರ್ನಾಟಕಕ್ಕೆ ಬರುವುದರಿಂದ ಬಿಜೆಪಿಗೆ ಅನುಕೂಲ ಆಗಲಿದೆ. ಮೋದಿ ರಾಜ್ಯಕ್ಕೆ ಎಷ್ಟು ಸಾರಿ ಬರ್ತಾರೆ ಅಷ್ಟು ಒಳ್ಳೆಯದ್ದು. ಚುನಾವಣೆ ಬಂದಾಗ ಎಲ್ಲಾ ಪಕ್ಷ ಸಮಾವೇಶ ಮಾಡುವುದು ಸಹಜ ಎಂದು ಹೇಳಿದ್ರು.

ಇದನ್ನು ಓದಿ :- ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ವಿವಾದಕ್ಕೆ ಇಂದು ತೆರೆ ಬೀಳುವ ಸಾಧ್ಯತೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!