ಕರ್ನಾಟಕದಲ್ಲಿ ಈ ವರ್ಷ ಸಾರ್ವಜನಿಕ ಗಣೇಶ ( GANESH ) ಪ್ರತಿಷ್ಠಾಪನೆ ಹಾಗೂ ಗಣೇಶೋತ್ಸವಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ( R. ASHOK ) ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಗಣೇಶೋತ್ಸವದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( BASAVARAJ BOMMAI ) ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯದಲ್ಲಿ ಈ ಹಿಂದೆ ಆಚರಿಸುತ್ತಿದ್ದ ರೀತಿಯಲ್ಲಿಯೇ ಗಣೇಶೋತ್ಸವ ಆಚರಣೆಗೆ ಅವಕಾಶ ಸಿಗಲಿದೆ. ಇದನ್ನೂ ಓದಿ : – 26 ಜಿಲ್ಲೆಗಳಿಗೆ 55 ಕೋಟಿಯನ್ನ ಪ್ರವಾಹ ಪರಿಹಾರ ಬಿಡುಗಡೆ – ಆರ್.ಅಶೋಕ್
ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಕೂಡಿಸಲು ಗಮನಹರಿಸಬೇಕು ಎಂದು ವಿನಂತಿಸಿದರು. ಕೋವಿಡ್ ಸಂದರ್ಭದಲ್ಲಿ ವಾರ್ಡ್ಗೆ ಒಂದು ಗಣಪತಿ ಕೂಡಿಸಬೇಕು ಎಂದು ಸರ್ಕಾರ ನಿರ್ಬಂಧ ವಿಧಿಸಿತ್ತು.
ಇದನ್ನೂ ಓದಿ : – ನಾವು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಕುಮಾರಸ್ವಾಮಿ,ಯಡಿಯೂರಪ್ಪ ಸಿಎಂ ಆಗಿದ್ದು – ಡಿ.ಕೆ ಶಿವಕುಮಾರ್