ಮಲೆನಾಡಿನಲ್ಲಿ ಈ ವರ್ಷದ ಮೊದಲ KFD (ಮಂಗನ ಕಾಯಿಲೆ) ಪ್ರಕರಣ ಪತ್ತೆಯಾಗಿದೆ. ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ KFD ಪತ್ತೆಯಾಗಿದೆ.
ಕೊಪ್ಪದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಟಿಕ್ ಪರೀಕ್ಷೆಗೆ ಆರೋಗ್ಯ ಇಲಾಖೆ ಕಳುಹಿಸಿತ್ತು. ಫಲಿತಾಂಶ ಪಾಸಿಟಿವ್ ಬಂದಿದೆ. ಹೀಗಾಗಿ ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ ಎದುರಾಗಿದ್ದು, ಆರೋಗ್ಯ ಇಲಾಖೆಯಿಂದ ಹೈ ಅಲಟ್ ಸಾರಲಾಗಿದೆ. ಈ ವರ್ಷದ ಮೊದಲ KFD ಪ್ರಕರಣ ಇದಾಗಿದ್ದು, ವ್ಯಕ್ತಿ ಇದ್ದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರತಿಯೊಬ್ಬರ ಬಗ್ಗೆ ನಿಗಾ ಇಡಲಾಗಿದೆ. ಇದನ್ನು ಓದಿ :- ಇಂದಿನಿಂದ ರಾಜ್ಯ ಸಾರಿಗೆ ನೌಕರರ ಪ್ರತಿಭಟನೆ…!
ಚಿಕ್ಕಮಗಳೂರು (CHIKKAMAGALURU)ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ KFD ಆತಂಕವಿದ್ದು, ಪ್ರತಿವರ್ಷ ಹಲವಾರು ಮಂದಿಯನ್ನು ಬಾಧಿಸುತ್ತದೆ. ಮಂಗನ ಮೈಯ ಮೇಲಿರುವ ಉಣ್ಣಿಗಳಿಂದ ಮನುಷ್ಯರಿಗೆ ಹರಡುವ ಈ ಕಾಯಿಲೆಯ ವೈರಸ್, ತೀವ್ರ ಜ್ವರ ಹಾಗೂ ಮೈಕೈ ನೋವಿನಿಂದ ವ್ಯಕ್ತಿಯನ್ನು ಬಳಲಿಸುತ್ತದೆ. ಸೋಂಕು ರೋಗವಾಗಿರುವ ಇದರಿಂದ ಕೆಲಮಂದಿ ಮೃತಪಟ್ಟಿದ್ದು ಇದೆ.
ಇದನ್ನು ಓದಿ :- ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ…!