ಮಂಗಳೂರಿನ ಬಾವುಟಗುಡ್ಡೆಯ ಯೆನ್ ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಟ ಮಾಡಿಕೊಂಡ ಘಟನೆ ನಡೆದಿದೆ. ಯುವಕರ ಜೊತೆ ಕೆಫೆಯಲ್ಲಿ ಕುಳಿತಿದ್ದ ಯುವತಿ ಮೇಲೆ ಕೆಫೆಗೆ ಆಗಮಿಸಿದ ಮತ್ತೊಬ್ಬ ಯುವತಿಯಿಂದ ಏಕಾಏಕಿ ಹಲ್ಲೆ ನಡೆದಿದೆ.
ಈ ವೇಳೆ ಕೆಫೆಯಲ್ಲಿ ಮತ್ತೊಬ್ಬ ಯುವತಿ ಗಲಾಟೆ ಆರಂಭಿಸಿದ್ದಾರೆ. ಹೀಗೆ ಒಟ್ಟು ಮೂವರು ಯುವತಿಯರ ನಡುವೆ ಹೊಡೆದಾಟ ಶುರುವಾಗಿದೆ. ಈ ಜಗಳ ಬಿಡಿಸಲು ಯುವಕರ ಪರದಾಡುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಜಗಳದ ವಿಡಿಯೋ ವೈರಲ್ ಆಗಿದ್ದು ಯುವತಿಯರ ಜಗಳದ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಹುಡುಗಿಯರ ಜಗಳ ಬಿಡಿಸಲು ಯುವಕರು ಪರದಾಡಿದ್ದಾರೆ.
ಇದನ್ನು ಓದಿ : – ಹೈಕೋರ್ಟ್ ನಿರ್ದೇಶನದಂತೆ ಧ್ವನಿವರ್ಧಕ ಬಳಸುವ ಮಸೀದಿ, ಮಂದಿರಗಳಿಗೆ ನೋಟಿಸ್ ನೀಡಲಾಗಿದೆ -ಕಮಲ್ ಪಂತ್