ಮಂಗಳೂರು (Manglauru) ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಕ್ (Sharik) ಗೆ ಬೆಂಗಳೂರು ನಂಟಿ ತ್ತು ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎನ್ ಐ ಎ (NIA) ಅಧಿಕಾರಿಗಳು ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರ್ಚಿಂಗ್ ನಡೆಸಿದ್ದಾರೆ.
ದಾಸರಹಳ್ಳಿ ಬಳಿಯ ಮನೆಯೊಂದರಲ್ಲಿ ಸರ್ಚಿಂಗ್ ಮಾಡಿದ್ದಾರೆ. ಶಾರಿಕ್ ಬೆಂಗಳೂರ (Bengaluru) ಲ್ಲೇ ವಾಸವಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್ ಐ ಎ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಉಗ್ರ ಮತೀನ್ ಜೊತೆ ಶಾರಿಕ್ ಅಮೃತಹಳ್ಳಿಯಲ್ಲೇ ವಾಸವಾಗಿದ್ದನಂತೆ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದವರ ಬಳಿ ಮಾಹಿತಿ ಸಂಗ್ರಹಿಸಿರೋ ಎನ್ ಐ ಎ ಟೀಂ ಉಗ್ರರ ಜಾಡು ಪತ್ತೆಹಚ್ಚಲು ಹೊರಸಾಹಸ ಪಡುತ್ತಿದೆ.
ಇದನ್ನೂ ಓದಿ : – ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗೆ ಸಹೋದರಿ ಪ್ರಿಯಾಂಕಾ ಗಾಂಧಿ ಸಾಥ್