ಇಂದು ವೈಕುಂಠ ಏಕಾದಶಿ (Vaikunta Ekadashi) ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನ (Iskon Temple) ದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಭಕ್ತರು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದಾರೆ.
ಇಸ್ಕಾನ್ ದೇವಸ್ಥಾನದಲ್ಲಿ ರಾತ್ರಿ 3ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಇಸ್ಕಾನ್ ನಲ್ಲಿ ಇಂದು ಒಂದು ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನ ಸಾಧ್ಯತೆ ಇದೆ. ಇಂದು ರಾತ್ರಿ 11 ರವರಗೂ ಇಸ್ಕಾನ್ ನಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಈಗಾಗಲೇ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇದನ್ನು ಓದಿ : – ಕೇಂದ್ರದ ನೋಟು ಅಮಾನ್ಯೀಕರಣ ನಿರ್ಧಾರವನ್ನು ಎತ್ತಿ ಹಿಡಿದಿದ ಸುಪ್ರೀಂಕೋರ್ಟ್
ಕೃಷ್ಣನ ದರ್ಶನ ಪಡೆದ ಬಳಿಕ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮತನಾಡಿ, ಪ್ರತಿವರ್ಷದಂತೆ ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದ್ದೇವೆ. ಇಸ್ಕಾನ್ ನಲ್ಲಿ ದೇಗುಲದಲ್ಲಿ ಓಡಾಡಿದ್ರೇ ನೆಮ್ಮದಿ ಸಿಗುತ್ತದೆ ಎಂದು ಹೇಳಿದ್ರು.
ಇದನ್ನು ಓದಿ : – ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಪ್ರಕರಣ – ಲಿಂಬಾವಳಿ ಸೇರಿ 6 ಜನರ ವಿರುದ್ಧ FIR