ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಉತ್ತರಾಧಿಕಾರಿಯನ್ನು ನಿರ್ಧರಿಸುವ ಚುನಾವಣೆಗೆ ಜುಲೈ 5 ರಂದು ಅಧಿಸೂಚನೆ ಹೊರ ಬೀಳುತ್ತೆ. ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನಾಂಕವಾಗಿದೆ. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಎಂದು ಆಯೋಗ ಮಾಹಿತಿ ನೀಡಿದೆ. ಇದನ್ನೂ ಓದಿ : – Maha Crisis – 52 ಶಾಸಕರನ್ನು ಬಿಟ್ಟರೂ ಪವಾರ್ ಅವರನ್ನು ಬಿಡಲ್ಲ- ಉದ್ಧವ್ ವಿರುದ್ಧ ಬಂಡಾಯ ಶಾಸಕರ ಅಸಮಾಧಾನ
ಅಂತೆಯೇ ನಾಮಪತ್ರ ಹಿಂಪಡೆಯಲು ಜುಲೈ 22 ಕೊನೆಯ ದಿನವಾಗಿದೆ. ಚುನಾವಣೆ ಆಗಸ್ಟ್ 6 ರಂದು ನಡೆಯಲಿದ್ದು, ಅದೇ ದಿನ ಮತಗಳನ್ನು ಎಣಿಕೆ ನಡೆಯಲಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಉಪರಾಷ್ಟ್ರಪತಿ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳಲಿದೆ.
ಇದನ್ನೂ ಓದಿ : – ವಿಶ್ವಾಸಮತ ಯಾಚನೆಗೆ ಠಾಕ್ರೆಗೆ ರಾಜ್ಯಪಾಲ ಸೂಚನೆ – ನಾಳೆ ಮುಂಬೈಗೆ ಮರಳುವುದಾಗಿ ಏಕನಾಥ್ ಶಿಂಧೆ ಹೇಳಿಕೆ