ಮಾಜಿ ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರಗೆ ನಾಯಕನಾಗುವ ಎಲ್ಲ ಕ್ವಾಲಿಟಿ ಇವೆ ಎಂದು ವಿಜಯಪುರದಲ್ಲಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ವಿಜಯೇಂದ್ರ ಸಿಎಂ ಆಗಲಿ. ಸಿಎಂ ಮಗ ಸಿಎಂ ಆದರೆ ತಪ್ಪೇನು ?ಎಂದು ನಿರಾಣಿ ಪ್ರಶ್ನಿಸಿದ್ದಾರೆ. ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ನಮ್ಮ ರಾಜ್ಯದಲ್ಲಿದ್ದವರು ಪ್ರಧಾನಿಯಾದರು. ಮುಖ್ಯಮಂತ್ರಿ ಮಗ ಮುಖ್ಯಮಂತ್ರಿ ಆದ್ರೆ ಏನ್ ತಪ್ಪಿದೆ. ಅದನ್ನ ನಿರ್ಧಾರ ಮಾಡಲು ರಾಜ್ಯ, ರಾಷ್ಟ್ರ ನಾಯಕರಿದ್ದಾರೆ.
ಎಲ್ಲ ಕ್ವಾಲಿಟಿಗಳು ವಿಜಯೇಂದ್ರಗೆ ಇದೆ ಅನ್ನೋದ್ರಲ್ಲಿ ಯಾವುದೆ ಅನುಮಾನ ಇಲ್ಲ. ಏನೇ ಜವಾಬ್ದಾರಿ ನೀಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ :- ಶೀಘ್ರದಲ್ಲಿಯೇ ಲೋಕಾಯುಕ್ತರ ನೇಮಕ ನಡೆಯಲಿದೆ – ಸಿಎಂ ಬಸವರಾಜ್ ಬೊಮ್ಮಾಯಿ
ಬಿಎಸ್ ವೈ ಸೈಡ್ಲೈನ್ ಕುರಿತು ಮಾತನಾಡಿದ ನಿರಾಣಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳಲಿ. ಯಡಿಯೂರಪ್ಪ ನಮ್ಮ ಪಕ್ಷದ ಮುಖಂಡರು, ಎರಡು ಮಾತೇ ಇಲ್ಲ. ಮುಂದೆ ಯಡಿಯೂರಪ್ಪ, ಸಂಘಪರಿವಾರ, ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ವಿಜಯೇಂದ್ರ ಎತ್ತರಕ್ಕೆ ಬೆಳೆಯುತ್ತಾನೆ ಎಂದ ಸಚಿವ ನಿರಾಣಿ ಕೊಂಡಾಡಿದ್ದಾರೆ.
ಇದನ್ನೂ ಓದಿ :- ಆರ್ ಬಿಐ ವಿತ್ತೀಯ ನೀತಿ ಪ್ರಕಟ- ರೆಪೊ ದರ 50 ಬೇಸಿಸ್ ಪಾಯಿಂಟ್ ಹೆಚ್ಚಿಸಿ ಶೇ. 4.90ಕ್ಕೆ ಏರಿಕೆ