ತ್ಯಾಗ ಬಲಿದಾನ, ಸತ್ಯ, ಸಮೃದ್ಧದ ಸಂಕೇತವಾದ ತಿರಂಗಕ್ಕೆ 75ವರ್ಷ ತುಂಬಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ (Yediyurappa) ಹೇಳಿದ್ದಾರೆ. ಬೆಂಗಳೂರಿ (Bengaluru) ನಲ್ಲಿ ಮಾತನಾಡಿದ ಅವರು ನಿನ್ನೆ ತಾನೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ.
ಏಸೂರು ಕೊಟ್ಟರು, ಈಸೂರು ಕೊಡೆವು ಅಂತ ಕರೆ ಕೊಟ್ಟಿರೋ ಈಸೂರಿಗೆ ಪ್ರಧಾನಿಗಳು ಶೋಭಾ ಕರಂದ್ಲಾಜೆಯವರನ್ನು ಕಳಿಸಿದ್ರು. ಇಂದು ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮ ಗಾಂಧಿಯವರನ್ನ (Mahatma gandhiji) , ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ (Ambedkar) ಅವರನ್ನ ಸ್ಮರಿಸಿಕೊಳ್ಳುವ ದಿನ. ಅಂಬೇಡ್ಕರ್ ಅವರಿಗೆ ಈ ಕಾಂಗ್ರೆಸ್ ಎಷ್ಟು ಕಿರುಕುಳ ಕೊಟ್ಟಿದೆ ಎಂದು ಆರೋಪಿಸಿದರು. ಈ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿಸುತ್ತೇನೆ. ಈಗಾಗಲೇ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದೆವು ಅನ್ನೋ ಭ್ರಮೆಯಲ್ಲಿದ್ದಾರೆ. ನಾಡಿನಲ್ಲಿ ಮತ್ತೆ ಪ್ರವಾಸ ಮಾಡಿ, ಬಿಜೆಪಿ (BJP) ಯನ್ನ ಮತ್ತೆ ಅಧಿಕಾರಕ್ಕೆ ತರುತ್ತೇವೆ. ನಾವು ಮಾಡಿದ ಅಭಿವೃದ್ಧಿ ಕಾರ್ಯ ಇಟ್ಟುಕೊಂಡು ಓಡಾಟ ಮಾಡಿದ್ರೆ. ಕಾಂಗ್ರೆಸ್ ಗೆ ಉಸಿರುಗಟ್ಟುವ ವಾತಾವರಣ ಬರಲಿದೆ. ಇಂದು ಸ್ವಾತಂತ್ರ್ಯ ಬಂದು 75ವರ್ಷಕ್ಕೆ ಕಾಲಿಟ್ಟಿದ್ದೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅವರು, ಹಿರಿಯರು ಅಹಿಂಸೆಯ ಆಚರಣೆ ಮಾಡ್ತಾರೆ. ದೇಶ ವಿಭಜನೆ, ಭಯೋತ್ಪಾದನೆ, ಇತರೆ ಎಲ್ಲವನ್ನೂ ದೇಶ ಎದುರಿಸಿ ನಿಂತಿದೆ. ಇದನ್ನೂ ಓದಿ : – ಒಂದು ಲಕ್ಷ ಜನ, ಒಂದು ಲಕ್ಷ ರಾಷ್ಟ್ರ ಧ್ವಜಗಳೊಂದಿಗೆ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಶುರು !
ಎಲ್ಲವನ್ನೂ ಎದುರಿಸಿ ನಿಲ್ಲೋ ಧೈರ್ಯ ಪ್ರಧಾನಿ ನರೇಂದ್ರ ಮೋದಿಗಿದೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪಡೆದ ನಾವೇ ಪುಣ್ಯವಂತರು. ಹಗಲು, ಇರುಳೆನ್ನದೆ ಕೆಲಸ ಮಾಡ್ತಿದ್ದಾರೆ. ಅಂತ ಕೆಲಸವನ್ನ ರಾಜ್ಯದಲ್ಲಿ ಮಾಡಿದ್ರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ವಿಶ್ವದ ಅನೇಕ ದೇಶಗಳು ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿದಿದ್ರೆ. ಭಾರತ ಮಾತ್ರ 6.5ರಷ್ಟು ಆರ್ಥಿಕ ಪರಿಸ್ಥಿತಿ ಚೇತರಿಕೆ ಕಂಡಿದೆ. ಈ ಮೂಲಕ ಭಾರತ ಯಾರಿಗೂ ಹೆದರಲ್ಲ ಅನ್ನೋದನ್ನ ತೋರಿಸಿಕೊಟ್ಟಿದೆ ಎಂದು ಯಡಿಯೂರಪ್ಪ ಮೋದಿಯನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ : – ಅಂಬೇಡ್ಕರ್ ನಿಧನ ಹೊಂದಿದಾಗ ಕಾಂಗ್ರೆಸ್ ನವರು ಮೂರಡಿ, ಆರಡಿ ಜಾಗ ಕೊಡಲಿಲ್ಲ – ಆರ್. ಅಶೋಕ್