ಯೋಗ ದಿನಾಚರಣೆ (Yoga day) ಹಿನ್ನಲೆಯಲ್ಲಿ, ಭದ್ರತೆ ವ್ಯವಸ್ಥೆಯನ್ನ(Security) ವೀಕ್ಷಣೆ ಮಾಡಿದ್ದೇನೆ ಎಂದು ಮೈಸೂರಿನಲ್ಲಿ (Mysuru) ಗೃಹ ಸಚಿವ ಆರಗ ಜ್ಞಾನೇಂದ್ರ (Araga gnanendra) ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಮೈಸೂರಿನಲ್ಲಿ ಮೋದಿ (Modi) ಯೋಗ ಮಾಡುತ್ತಿರುವುದು ನಮ್ಮ ಹೆಮ್ಮೆ. ಗೃಹ ಇಲಾಖೆ ಎಲ್ಲಾ ಏರ್ಪಾಡುಗಳನ್ನ ಮಾಡಿದ್ದಾರೆ. ಪ್ರಧಾನ ಮಂತ್ರಿಗೆ ಸಾಕಷ್ಟು ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.
ಅಗ್ನಿಪಥ್ ಗಲಾಟೆ ವಿಚಾರ
ಅಗ್ನಿಪಥ್ (Agni path) ಒಂದು ಒಳ್ಳೆಯ ಯೋಜನೆ. ಯುವ ಜನಾಂಗ (Youth) ಮೋದಿಗೆ ಅಭಿನಂದನೆ ಸಲ್ಲಿಸಬೇಕು. ಕರ್ನಾಟಕ (Karnataka) ರಾಜ್ಯದ ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ ಬೇರೆ ಬೇರೆ ಸೆಕ್ಯೂರಿಟಿ ಎಜೆನ್ಸಿಗಳಲ್ಲಿ ಅವರಿಗೆ ಉದ್ಯೋಗ ಕೊಡಲು ವ್ಯವಸ್ಥೆ ಮಾಡಲಾಗಿದೆ. ದೇಶ ಭಕ್ತರು ದೇಶ ಕಾಯೋದಕ್ಕೆ ಹೋಗುತ್ತಾರೆ. ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇದನ್ನು ಓದಿ :– ಅಸ್ಸಾಂ – ಮೇಘಾಲಯದಲ್ಲಿ ಪ್ರವಾಹದಿಂದಾಗಿ 1700 ಗ್ರಾಮಗಳು ಮುಳುಗಡೆ
ಇದೇ ವೇಳೆ ಅಗ್ನಿಪಥ್ ಗಲಾಟೆ ಹಿಂದೆ ಕಾಂಗ್ರೆಸ್ (Congress) ಕೈವಾಡ ಇದೆ ,ಇದನ್ನ ನೇರವಾಗಿ ಹೇಳುತ್ತೇನೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನು ಓದಿ :– ವಿಜಯನಗರದಲ್ಲಿ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಯೋಗೋತ್ಸವದ ಪ್ರೊಮೊ ಬಿಡುಗಡೆ