ಅಪ್ಪು ನಾಯಕನಟನಾಗಿ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್ ಚಿತ್ರವು ಇಂದು ವಿಶ್ಯಾದ್ಯಾಂತ ತೆರೆಕಂಡಿದೆ. ಪುನೀತ್ ಇಲ್ಲ ಎಂಬ ನೋವಿನ ನಡುವೆಯೂ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ. ಕರ್ನಾಟಕ ರತ್ನ ಪುನೀತ್ ಅಭಿನಯದ ‘ಜೇಮ್ಸ್’ ಸಿನಿಮಾ ವಿಶ್ವದಾದ್ಯಂತ 4 ಸಾವಿರ ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಿದೆ. ‘ಜೇಮ್ಸ್’ ನೋಡಿ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ. ಜೇಮ್ಸ್ ರಿಲೀಸ್ ಆದ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿದ್ದು, ಕೆಲ ಚಿತ್ರಮಂದಿರಗಳ ಬಳಿ ಅನ್ನದಾನ, ರಕ್ತದಾನ ಶಿಬಿರ ಆಯೋಜಿಸಲಾಗಿದೆ.
0 95 Less than a minute