ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. ಕಾಂಗ್ರೆಸ್ ನವರು ಯಾರಾದ್ರು ಭ್ರಷ್ಟಾಚಾರ ಮಾಡಿದ್ರೆ ಒದ್ದು ಒಳಗೆ ಹಾಕಿ ಎಂದು ಬಿಜೆಪಿ ವಿರುದ್ದ ಡಾ. ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಬರುಡುಗುಂಟೆ ಗ್ರಾಮದಲ್ಲಿ ಮಾತನಾಡಿದ ಅವರು ಇನ್ನೆಷ್ಟು ಕಂಟ್ರಾಕ್ಟರ್ ಗಳನ್ನು ಬಲಿ ಪಡೆಯುತ್ತೀರಿ. ಇದನ್ನೂ ಓದಿ :- ಮೀನು ಹಿಡಿಯಲು ಹೋಗಿ ಸಹೋದರರಿಬ್ಬರು ನಾಪತ್ತೆ
ಯಾವ ಮುಖ ಇಟ್ಟುಕೊಂಡು ಸರ್ಕಾರ ನಡೆಸುತಿದ್ದೀರಿ. 550 ಪಿಎಸ್ ಐ ಹುದ್ದೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದು ಪಿ ಎಸ್ ಐ ಹುದ್ದೆಗೆ 9 ಲಕ್ಷ ಲಂಚ ಪಡೆಯುತ್ತೀರಿ ಎಂದು ಆರೋಪಿಸಿದ್ದಾರೆ. ಮೋದಿ ಪತ್ನಿಯನ್ನು ನೋಡಿಕೊಳ್ಳಲು ಆಗದವರು. ರಾಮನ ಬಗ್ಗೆ ಮಾತನಾಡಲು ಮೋದಿ ನಾಲಾಯಕ್ ಎಂದು ಬಿಜೆಪಿ ವಿರುದ್ದ ಉಗ್ರಪ್ಪ ಕಿಡಿಕಾರಿದ್ದಾರೆ.
ಇದನ್ನೂ ಓದಿ :- ಪಿಎಸ್ಐ ನೇಮಕಾತಿ ಅಕ್ರಮ – ಪ್ರಭಾವಿ ಸಚಿವರ ಆಶ್ರಯದಲ್ಲಿದ್ದಾರಾ ದಿವ್ಯಾ ಹಾಗರಗಿ ?