ಮೈಸೂರಿನ ಹುಣಸೂರಿನಲ್ಲಿ ಇಂದು ಅದ್ದೂರಿಯಾಗಿ ಕೆಂಪೇಗೌಡ ಜಯಂತಿ ನಡೆದಿದೆ. ಒಂದೇ ವೇದಿಕೆಯಲ್ಲಿ ಬದ್ದ ವೈರಿಗಳಾದ ಡಿಕೆಶಿ -ಹೆಚ್. ಡಿ. ಕೆ ಕಾಣಿಸಿಕೊಂಡಿದ್ದಾರೆ.
ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ( nirmalanadha ) ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆದಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳ ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಸಚಿವ ಎಸ್.ಟಿ ಸೋಮಶೇಖರ್, ಶಾಸಕ ಜಿ .ಟಿ ದೇವೇಗೌಡ ಮತ್ತು ಸಂಸದ ಪ್ರತಾಪ ಸಿಂಹರಿಗೂ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇದನ್ನೂ ಓದಿ : – ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿ ಕಬ್ಬಿಣ ಅದಿರು ಉತ್ಪಾದನೆ ಹೆಚ್ಚಿಸಲು ಸುಪ್ರೀಂಕೋರ್ಟ್ ಸಮ್ಮತಿ
ಗುತ್ತಿಗೆದಾರರಿಂದ ಕಮಿಷನ್ ಪಡೆಯುವುದು ಶೇ.3-4ರಷ್ಟಿದೆ. ಉಪನೋಂದಣಿ ಕಚೇರಿಯಲ್ಲಿ ಚಂದಾ ಎತ್ತುವುದೂ ಇದೆ. ಇದು ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದೆ ಜನ ಸಂತೋಷವಾಗಿ ಕೊಟ್ಟು ಹೋಗುತ್ತಿದ್ದರು. ಆದರೆ ಈಗ ಬಲವಂತವಾಗಿ ಕೀಳುವ ಕೆಲಸ ಆಗುತ್ತಿದೆ. ಇದು ವ್ಯವಸ್ಥೆಯ ದೋಷ, ಯಾರನ್ನೂ ದೂರುವುದಿಲ್ಲ. ಇದು ಬಿಜೆಪಿ( bjp ) ಯಿಂದ ಆರಂಭವಾಗಿದ್ದು. 2008ರ ಬಿಜೆಪಿ ಸರ್ಕಾರದಿಂದ ಇಂತಹ ವಾತಾವರಣ ಸೃಷ್ಟಿಯಾಗಿದೆ. ನಾನು ಸಿಎಂ ಆಗಿದ್ದಾಗ ಇಂತಹ ಕಮಿಷನ್ ವ್ಯವಸ್ಥೆ ಇರಲಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿ ಶಾಸಕರ ಹಂತದಲ್ಲಿ ಕಮಿಷನ್ ಇದೆ ಎಂದು ಹೇಳಿದ್ದಾರೆ.
ಎಲ್ಲಾ ಪಕ್ಷಗಳ ಶಾಸಕರು ಗಣಿಗಾರಿಕೆ ಲೈಸೆನ್ಸ್ ಪಡೆದಿದ್ದಾರೆ. ಮರಳು ದಂಧೆ ಆರಂಭವಾಗಿದ್ದು ಬಿಜೆಪಿ ಸರ್ಕಾರದಿಂದ. ನನ್ನ ಕಾಲದಲ್ಲೂ ಕೆಲ ಇಲಾಖೆಯಲ್ಲಿ ಪರ್ಸೆಂಟೇಜ್ ಇತ್ತು. ಬೆಕ್ಕಿಗೆ ಘಂಟೆ ಕಟ್ಟುವರು ಯಾರು..? ಎಂದು ಪ್ರಶ್ನಿಸಿದ್ರು. ಗುತ್ತಿಗೆದಾರರು ಟೆಂಡರ್ ಬಾಯ್ಕಾಟ್ ಮಾಡಿ ಎಂದು ಸಲಹೆ ನೀಡಿದ್ದು, ಇಂತಹ ವ್ಯವಸ್ಥೆಗೆ ಪಾಲುದಾರರಾಗಲ್ಲವೆಂದು ದೂರ ಉಳಿಯಲಿ ಎಂದು ಗುತ್ತಿಗೆದಾರರಿಗೆ ಹೆಚ್ .ಡಿ.ಕೆ ಸಲಹೆ ನೀಡಿದ್ರು.
ನಾನು ಸಿಎಂ ಆಗಿದ್ದಾಗ ಲಾಟರಿ ನಿಷೇಧಕ್ಕೆ ವಿರೋಧವಿತ್ತು. ಅದಕ್ಕಾಗಿ ಎಷ್ಟೆಲ್ಲ ಆಫರ್ ನೀಡಿದ್ದರು. ನಾನು ಅದನ್ನ ತಿರಸ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಅವರೆಲ್ಲರನ್ನೂ ಜೈಲಿಗೆ ಕಳುಹಿಸುವ ಉದ್ದೇಶ ಈಗಲೂ ಇಲ್ಲ. ಎರಡೂ ಪಕ್ಷಗಳಲ್ಲೂ ಕೂಡ ಭ್ರಷ್ಟಾಚಾರ ನಡೆದಿದೆ. ನಾನು ಸಿಎಂ ಆಗಿದ್ದಾಗ ಪ್ರತಿ ತಿಂಗಳು ನೇರವಾಗಿ ಗುತ್ತಿಗೆದಾರರಿಗೆ ಹಣ ಹೋಗುತ್ತಿತ್ತು. ನಾನು ಸಿಎಂ ಆಗಿದ್ದಾಗ 46 ಮಂದಿ ಎಂಜಿನಿಯರ್ ಗೆ ಪ್ರಮೋಷನ್ ನೀಡಿದೆವು. ನಮಗೆ ಒಂದು ಗ್ಲಾಸ್ ನೀರು ನೀಡಿಲ್ಲ. ಒಂದು ರೂಪಾಯಿ ಪಡೆದಿಲ್ಲ. ನಾವು ಯಾವ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ನಾವು ಯಾರಿಗೂ ಒತ್ತಡ ಹೇರಿಲ್ಲ. ಯಾರ ಬಳಿಯೂ ಚಂದ ಎತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : – ಸಿಎಂ ಆಗುವ ಯೋಗ್ಯತೆ ನನಗೂ ಇದೆ – ಸಚಿವ ಉಮೇಶ್ ಕತ್ತಿ