ಪಠ್ಯಪುಸ್ತಕ ವಿವಾದ ವಿಚಾರವಾಗಿ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಣ ದೇಶವನ್ನ ಕಟ್ಟುವಂತದ್ದು. ಶಿಕ್ಷಣ ಬಹಳ ಪ್ರಮುಖವಾದುದ್ದು, ಯಾವ ನಾಡಿನಲ್ಲಿ, ಯಾವ ದೇಶದಲ್ಲಿ,ಯಾವ ರಾಜ್ಯದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಹಾಳಾಗುತ್ತೋ ಆ ದೇಶ, ಆ ರಾಜ್ಯ ಹಾಳಾಗುತ್ತದೆ.
ಎಲ್ಲಾರು ಸೇರಿ ನಾವು ಹಾಳು ಮಾಡುತ್ತಿದ್ದೇವೆ. 3 ರಾಜಕೀಯ ಪಕ್ಷಗಳು ಅವರ ಪಾರ್ಟಿಯ ಮ್ಯಾನಿಫೆಸ್ಟ್ ತರ ಚರ್ಚೆ ಮಾಡುತ್ತಾರೆ. ಇದು ಯಾವುದೇ ರಾಜಕೀಯ ಪಕ್ಷಗಳ ಮ್ಯಾನಿ ಫ್ಯಾಸ್ಟೋ ಅಲ್ಲ ಎಂದು ಹೇಳಿದ್ದಾರೆ. ಅಂಬೇಡ್ಕರ್ ಸಂವಿಧಾನ ಬರೆದವರು. ಎಲ್ಲಾದಕ್ಕೂ ನಾಯಕತ್ವ ವಹಿಸಿದ್ದು ಅಂಬೇಡ್ಕರ್. ಸಂವಿಧಾನದ ಚೌಕಟ್ಟಿನಲ್ಲಿ ದೇಶ ನಡೆಯುತ್ತಿದೆ. ಇದನ್ನೂ ಓದಿ :- ವಿಜಯೇಂದ್ರ ಸಿಎಂ ಆಗಲಿ- ಸಿಎಂ ಮಗ ಸಿಎಂ ಆದರೆ ತಪ್ಪೇನು ?- ನಿರಾಣಿ
ಸಂವಿಧಾನ ಬರೆದ ಅಂಬೇಡ್ಕರ್ ರವರನ್ನ ಎಲ್ಲೋ ಇದ್ರು ಎನ್ನುವುದು ತಪ್ಪು ಎಂದು ವಿಶ್ವನಾಥ್ ಅಭಿಪ್ರಾಯಪಟ್ರು. ಕಮಿಟಿ ರಚನೆ ಮಾಡಿದ್ದು ಸುರೇಶ್ ಕುಮಾರ್. ಯಾಕೆ ಸುರೇಶ್ ಕುಮಾರ್ ಮಾತ್ನಾಡುತ್ತಿಲ್ಲ. ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ತೀರ್ಥರನ್ನ ತಂದು ಹಾಕಿದ್ರು. ಅವರ ಶಿಕ್ಷಣದ ಹಿನ್ನೆಲೆ ಏನು ಅಂತ ಪ್ರಶ್ನಿಸಿದ್ರು. ಏನು ಗೊತ್ತಿಲ್ಲದವರಿಗೆ ಮಕ್ಕಳಿಗೆ ಪುಸ್ತಕ ಬರೆಯಿರಿ ಅಂದ್ರೆ ಅದನ್ನ ನಮ್ಮ ಮಕ್ಕಳು ಓದ್ಬೇಕಾ ಎಂದು ಪ್ರಶ್ನೆ ಮಾಡಿದ್ರು.
ಇದನ್ನೂ ಓದಿ :- ಶೀಘ್ರದಲ್ಲಿಯೇ ಲೋಕಾಯುಕ್ತರ ನೇಮಕ ನಡೆಯಲಿದೆ – ಸಿಎಂ ಬಸವರಾಜ್ ಬೊಮ್ಮಾಯಿ