ಬಿ ಜೆ ಪಿ (BJP) ರಾಷ್ಟ್ರೀಯ ಅಧ್ಯಕ್ಷ ನಡ್ಡಾ (JP.Nadda) ರವರು ಕೊಪ್ಪಳ (Koppala) ದ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್.ಯಡಿಯೂರಪ್ಪ (Yediyurappa) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಆ ಕಾರ್ಯಕ್ರಮಕ್ಕೆ ನಾನು ಭಾಗವಹಿಸಲು ಹೋಗುತ್ತಿದ್ದೇನೆ.ಬೇರೆ ಕಾರಣಗಳಿಂದ ನಾನು ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿರಲಿಲ್ಲ. ಹೋಗಲೇಬೇಕು ಅನ್ನೋ ಪರಿಸ್ಥಿತಿ ಬಂದ ಹಿನ್ನೆಲೆ ಕೊಪ್ಪಳಕ್ಕೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ.
ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ವಾಪಸ್ ಬರುತ್ತೇನೆ ಎಂದು ಹೇಳಿದ್ರು.ಯಾವುದೇ ರೀತಿ ಭಿನ್ನಾಭಿಪ್ರಾಯ, ಗೊಂದಲಗಳು ಇಲ್ಲ. ಮಾಧ್ಯಮದವರು ಇದನ್ನ ಸೃಷ್ಟಿ ಮಾಡಲು ಹೋಗಬೇಡಿ.ನಾವು ಒಟ್ಟಾಗಿದ್ದೇವೆ, ಒಂದಾಗಿದ್ದೇವೆ.
ಮುಂದಿನ ಚುನಾವಣೆ (Election) ಯಲ್ಲಿ ಪಕ್ಷವನ್ನು ಬಹುಮತಕ್ಕೆ ತಂದು ಸರ್ಕಾರ ರಚನೆ ಮಾಡುತ್ತೇವೆ ಅದಕ್ಕೆ ಯಾವ ಶ್ರಮ ಬೇಕಾದರೂ ಹಾಕುತ್ತೇವೆ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇವೆ. ಬಿಜೆಪಿಯ ಪರವಾಗಿ ಅಲೆ ರಾಜ್ಯದಲ್ಲಿದೆ.ಎಲ್ಲಾ ಕಾರ್ಯಕ್ರಮಕ್ಕೂ ಹೋಗುತ್ತಿದ್ದೇನೆ.ಯಾವ ಕಾರ್ಯಕ್ರಮಕ್ಕೂ ತಪ್ಪಿಸಿಲ್ಲ. ಸರ್ಕಾರದ ಕಾರ್ಯಕ್ರಮಕ್ಕೆ ಹೋಗುವುದು ಸರಿಯಲ್ಲ ಎಂದು ಹೋಗುತ್ತಿಲ್ಲ. ಸಾರ್ವಜನಿಕ ಕಾರ್ಯಕ್ರಮಕ್ಕೆ ನನ್ನನ್ನು ಯಾರು ಕರೆಯಬೇಕಾಗಿಲ್ಲ. ಇದನ್ನು ಓದಿ : – ದಲಿತ ಸಿಎಂ ಕೂಗು ಇವತ್ತಿಗೆ ಅಪ್ರಸುತ – ಡಾ.ಜಿ.ಪರಮೇಶ್ವರ್
ನನ್ನ ಕರ್ತವ್ಯ ನಾನು ಹೋಗುತ್ತೇನೆ,ಪಕ್ಷವನ್ನ ಬಲಪಡಿಸಲು ನಾನು ಸಿದ್ಧನಿದ್ದೇನೆ. ಇವತ್ತು ನಾನು ಕಾರ್ಯಕ್ರಮಕ್ಕೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಬರಲೇಬೇಕು ಎಂದು ಒತ್ತಾಯ ಬಂದ ಹಿನ್ನೆಲೆ ನಾನು ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಇದನ್ನು ಓದಿ : – ಅಕ್ರಮ ಮದ್ಯ ಸೇವಿಸಿ 17 ಮಂದಿ ಸಾವು – ನೀವೇ ಕುಡಿದಿದ್ದೀರಿ ಎಂದು ಬಿಜೆಪಿ ವಿರುದ್ಧ ನಿತೀಶ್ ಕಿಡಿ