ಒಂದೊಂದು ಚುನಾವಣೆಗೆ ಸಿದ್ದರಾಮಯ್ಯ ಒಂದೊಂದು ಕ್ಷೇತ್ರಕ್ಕೆ ಯಾಕೆ ಹೋಗ್ತಿದ್ದಾರೆ..? -ಡಾ.ಕೆ. ಸುಧಾಕರ್ ಪ್ರಶ್ನೆ

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೋಲಾರ ( KOLARA ) ದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ (CHIKKABALLAPURA) ದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (K.SUDHAKAR) ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ( CONGRESS ) ಹೈಕಮಾಂಡ್ ತೀರ್ಮಾನ ಕೊಟ್ರೇ ನಿಲ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ನಮ್ಮದೇನು ತಕರಾರಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಏನು ವ್ಯೂಹ ಮಾಡಬೇಕೋ ಅದು ಮಾಡ್ತೇವೆ. ಸಿದ್ದರಾಮಯ್ಯ ನವರ ನಿರ್ಧಾರ ರಾಜಕೀಯವಾಗಿ ಮಾರಕವಾಗಲಿದೆ. ಸಿದ್ದರಾಮಯ್ಯ ( SIDDARAMAIAH ) ಸ್ಪರ್ಧೆಯಿಂದ ಕೋಲಾರ ಚಿಕ್ಕಬಳ್ಳಾಪುರ ದ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಜಾತಿ ಮತಗಳ ಲೆಕ್ಕಾಚಾರದ ಮೇಲೆ ಕೋಲಾರ ಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ.ಕೋಲಾರದಲ್ಲಿ ಕೆಲವರ ಬೇರುಗಳು ಅಲ್ಲಾಡುತ್ತಿವೆ. ಸಿದ್ದರಾಮಯ್ಯ ರನ್ನ ಬಲಿ ಪಶು ಮಾಡಲು ಕೋಲಾರಕ್ಕೆ ಕರೆ ತರ್ತಿದ್ದಾರೆ. ಒಂದೊಂದು ಚುನಾವಣೆಗೆ ಸಿದ್ದರಾಮಯ್ಯ ಒಂದೊಂದು ಕ್ಷೇತ್ರಕ್ಕೆ ಯಾಕೆ ಹೋಗ್ತಿದ್ದಾರೆ..? ಎಂದು ಪ್ರಶ್ನಿಸಿದ್ದಾರೆ. ಇದನ್ನು ಓದಿ :- ಮೆಟ್ರೋ ಪಿಲ್ಲರ್ ಕುಸಿತದ ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ – BMRCL

ಸಿದ್ದರಾಮಯ್ಯ ಬಗ್ಗೆ ನನಗೆ ಒಂದು ಗೌರವ ಇದೆ. ಜೊತೆಯಲ್ಲಿ ಕೆಲಸ ಮಾಡಿದ್ದೇವೆ ನಮ್ಮ ನಾಯಕರಾಗಿ ಜೊತೆಯಲ್ಲಿದ್ದೀವಿ. ಹಾಗಾಗಿ ಅವರ ಬಗ್ಗೆ ವಿಶ್ವಾಸವಿದೆ. ಈಗ ಅವರ ಪಕ್ಷ ಬೇರೆ ನನ್ನ ಪಕ್ಷ ಬೇರೆ ಇದೆ ನಮ್ಮ ದಾರಿ ಬೇರೆ ಇದೆ. ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎನ್ನವ ನಂಬಿಕೆ ನನಗಿದೆ ಎಂದು ತಿಳಿಸಿದ್ರು.

ಇದನ್ನು ಓದಿ :- ಆಪ್ತ ಬೆಂಬಲಿಗನ ಕ್ಷೇತ್ರ ಚಾಮರಾಜಪೇಟೆಯಲ್ಲಿ ಸಿದ್ದರಾಮಯ್ಯ ರೌಂಡ್ಸ್…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!