ದೇವೆಗೌಡರ (devegowda ) ವಿಚಾರದಲ್ಲಿ ಕೆಲವೊಂದು ಹೇಳಿಕೆಗಳು ಕೇಳಿಬಂದಿವೆ. ಮಾಧ್ಯಮದಲ್ಲಿ ಕೆಲವೊಂದು ಕಾಂಗ್ರೆಸ್ (congress) ನಾಯಕರು ನಮ್ಮ ಪಕ್ಷದ ಮೇಲೆ ಅಪಾರ್ಥ ಬರುವ ಹಾಗೆ ಮಾತನಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (h.d kumarswamy) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ನವರ ಹುಟ್ಟುಹಬ್ಬದ ಕಾರ್ಯಕ್ರಮ ಕೆಡಿಸಬೇಕೆಂದು ಕುಮಾರಸ್ವಾಮಿ ಹುನ್ನಾರ ನಡೆಸಿದ್ದಾರೆ ಅಂತ ಕೆಲವರು ಹೇಳಿದ್ದಾರೆ. ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮ ಅದು ಅವರ ವೈಯಕ್ತಿಕ ವಿಚಾರ. ನಮ್ಮ ಪಕ್ಷಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನನಗೆ ಸಿದ್ದರಾಮಯ್ಯನವರ ಮೇಲೆ ದ್ವೇಷ ಇಲ್ಲ. ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಾವ್ಯಾಕೆ ಆಕ್ಷೇಪ ಮಾಡಲಿ ಎಂದು ತಿಳಿಸಿದ್ರು. ಇದನ್ನೂ ಓದಿ : – ರಾಜಣ್ಣ ಹೇಳಿಕೆ ಖಂಡಿಸಿ ಮಧುಗಿರಿಯಲ್ಲಿ ಜೆಡಿಎಸ್ ಪ್ರತಿಭಟನೆ
ದೇವೆಗೌಡರ ಬಗ್ಗೆ ರಾಜಣ್ಣನವರ ಹೇಳಿಕೆ ವಿಚಾರ
ಸಿದ್ದರಾಮಯ್ಯ ನವರ ಟೀಂ ದೇವೇಗೌಡರು ಇನ್ನೆಷ್ಡು ವರ್ಷ ಇರ್ತಾರೆ, ಮುಗೀತು ದೇವೆಗೌಡರು ಕಾಲ ಅಂತ ಆಂತರಿಕವಾಗಿ ಮಾತನಾಡಿದ್ದಾರೆ. ರಾಜಣ್ಣನವರು ವೇದಿಕೆ ಮೇಲೆ ಅದನ್ನೆ ಬಾಯಿತಪ್ಪಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ರು.
ರಾಜಣ್ಣನವರು ಕ್ಷಮೆ ಕೇಳಬೇಕು – ಸಿಎಂ ಇಬ್ರಾಹಿಂ
ರಾಜಣ್ಣನವರು ಕ್ಷಮೆ ಕೇಳಬೇಕು. ನಾಳೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಏನಾದ್ರೂ ಅಹಿತಕರ ಘಟನೆ ನಡೆದ್ರೆ ಅದಕ್ಕೆ ನಾವು ಹೊಣೆಯಲ್ಲಎಂದು ಪರೋಕ್ಷವಾಗಿ ರಾಜಣ್ಣ(rajanna) ನವರಿಗೆ ಸಿಎಂ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.
ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ. ಕಾಂಗ್ರೆಸ್, (congress) ಬಿಜೆಪಿ ನಾಯಕರಿಗೆ ಇಬ್ರಾಹಿಂ ಸವಾಲು ಹಾಕಿದ್ದಾರೆ. ಇದುವರೆಗೆ ಕಾಂಗ್ರೆಸ್ ನವ್ರು ಸಿಎಂ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ. ಬಿಜೆಪಿಯವರು ಕೂಡ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿಲ್ಲ. ಇನ್ನೂ ನಾವು ಹೇಳಿದ್ದೇವೆ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಅಂತಾ. ನಿಮಗೆ ತಾಕತ್ ಇದ್ರೆ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಎಂದು ಹೇಳಿದ್ರು.
ಇದನ್ನೂ ಓದಿ : – ಕೈ ಬಿಟ್ಟು ತೆನೆ ಹೊರಲು ಸಜ್ಜಾಗುತ್ತಿದ್ದಾರಾ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ?