ಮೈಸೂರು (Mysuru) ಜಿಲ್ಲೆಯ ಕೆಂಚನಹಳ್ಳಿ ಗ್ರಾಮಕ್ಕೆ ಕಂದಾಯ ಸಚಿವ ಆರ್. ಅಶೋಕ್ ಆಗಮಿಸಿದ್ರು. ಕಂದಾಯ ಸಚಿವರಿಗೆ ಕೆಂಚನಹಳ್ಳಿ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿದ್ದಾರೆ. ಸಚಿವ ಆರ್. ಅಶೋಕ್ (R.ashok) ವಿವಿಧ ಸರಕಾರಿ ಸವಲತ್ತುಗಳನ್ನು ವಿತರಣೆ ಮಾಡಲಿದ್ದಾರೆ.
ಕೆಂಚನಹಳ್ಳಿ ಗ್ರಾಮದಲ್ಲಿ ಇಂದು ಸಚಿವ ಅರ್. ಅಶೋಕ್ ವಾಸ್ತವ್ಯ ಹೂಡಲಿದ್ದಾರೆ. ಇದೇ ವೇಳೆ ಇತಿಹಾಸದಲ್ಲಿ ಯಾವ ಕಂದಾಯ ಸಚಿವರು ಕಾಡಂಚಿನ ಗ್ರಾಮದಲ್ಲಿ ವಾಸ್ತವ್ಯ ಹೂಡಿರಲಿಲ್ಲ.ಕೆಂಚನಹಳ್ಳಿ ಗ್ರಾಮದಲ್ಲಿ 24 ಗಂಟೆ ವಾಸ್ತವ್ಯವಿದ್ದು ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ರೂಪಿಸುವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆ.ಇದಕ್ಕೂ ಪರಿಹಾರ ಹುಡುಕಬೇಕಾಗಿದೆ. ಇನ್ನು 53 ವರ್ಷಗಳಿಂದ ಆದಿವಾಸಿಗಳು ಸಾಗುವಳಿ ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ :– ಮಂಗಳೂರಿನಲ್ಲಿ ಬಸವರಾಜ್ ಬೊಮ್ಮಾಯಿ – ಕಟೀಲ್ ಭೇಟಿ
ಕಬಿನಿ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಮುಳುಗಡೆಯಾದ ಜಮೀನಿಗೆ ಪರ್ಯಾಯ ಭೂಮಿ ಕೊಡಬೇಕಾಗಿದೆ. ಅರಣ್ಯ ಮತ್ತು ಕಂದಾಯ ಭೂಮಿ ಯಾವುದು ಎಂದು ಗುರುತಿಸಿ ಭೂಮಿ ಕೊಡಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ :– ನಾನು ಬಿಜೆಪಿ ಏಕೆ ಬಿಡಲಿ..? -ರಮೇಶ್ ಜಾರಕಿಹೊಳಿ ಪ್ರಶ್ನೆ