ನಮ್ಮೆಲ್ಲರ ಭಾವನೆಗೆ ಗೌರವ ಕೊಟ್ಟು ನಿರ್ಮಲಾ ಸೀತಾರಾಮನ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಇಬ್ಬರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣಕ್ಕಿಳಿಸಿದ್ದೇವೆ. ಅವರನ್ನೂ ಗೆಲ್ಲಿಸೋ ಪ್ರಯತ್ನ ಮಾಡ್ತಿದ್ದೇವೆ ಎಂದು ಬಿಎಸ್ ವೈ ಹೇಳಿದ್ರು.
ಇದೇ ವೇಳೆ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ 4 ನೇ ಸೀಟು ಯಾರಾದ್ರೂ ಗೆಲ್ಲಲೇಬೇಕಲ್ಲ. ಇದನ್ನೂ ಓದಿ : – ರಾಜ್ಯಸಭೆಯಲ್ಲಿ ರಾಜ್ಯದ ಜನ ಮೆಚ್ಚುವ ರೀತಿ ಕೆಲಸ ಮಾಡುತ್ತೇನೆ – ನಟ ಜಗ್ಗೇಶ್
ರಾಜ್ಯಾಧ್ಯಕ್ಷರು,ಸಿಎಂ ಯೋಚನೆ ಮಾಡಿ ಅಭ್ಯರ್ಥಿ ಹಾಕಿದ್ದೇವೆ. ಲೆಹರ್ ಸಿಂಗ್ ಗೆಲ್ಲಲು ಬೇಕಾದ ಕಸರತ್ತು ಮಾಡ್ತೀವಿ. 2 ನೇ ಪ್ರಾಶಸ್ತ್ಯ ಮತ ನಮಗೆ ಹೆಚ್ಚಾಗಿದೆ. ಜೆಡಿಎಸ್ ಯಾರಿಗೆ ಬೆಂಬಲ ಸೂಚಿಸುತ್ತಾರೆ ಅನ್ನೋದನ್ನ ನೋಡಬೇಕು.
ಈಗಾಗಲೇ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟಿದ್ದಾರೆ. ಈ ಹಿಂದೆ ಕೂಡ ಅಧಿಕಾರ ಕೊಟ್ಟು ಕೆಳಗಿಸಿದ್ದಾರೆ ಅನ್ನೊದು ದೇವೆಗೌಡರಿಗೆ ಗೊತ್ತಿದೆ. ಗೆಲ್ಲಲು ಏನು ಕಾರ್ಯತಂತ್ರ ಮಾಡಬೇಕು ಅದನ್ನು ನಾವು ಮಾಡುತ್ತಿದ್ದೇವೆ. ನಾವೇನು ಅಡ್ಡಮತಗಳಿಗೆ ಪ್ರಯತ್ನ ಮಾಡಲ್ಲ. ಆದ್ರೆ ಅಡ್ಡ ಮತಗಳು ಆಗುವ ಆತಂಕವಿದೆ ಎಂದು ಅಶೋಕ್ ತಿಳಿಸಿದ್ರು.
ಇದನ್ನೂ ಓದಿ : – RS ELECTION – ರಾಜ್ಯಸಭೆ ಚುನಾವಣೆ – ನಿರ್ಮಲಾ ಸೀತಾರಾಮನ್ , ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ