ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin gadkari) ಬೆಂಗಳೂರು (Bangalore) ಮೈಸೂರು (Mysuru) ರಾಷ್ಟ್ರೀಯ ಹೆದ್ದಾರಿ ರಸ್ತೆ ಪರಿಶೀಲನೆ ಮಾಡ್ತಿದ್ದಾರೆ. ದಶಪಥ ಹೆದ್ದಾರಿ ವಾಹನ ಸವಾರರಿಗೆ ಉಪಯುಕ್ತವಾಗಿದೆ. ಅದರ ಜೊತೆಗೆ ಕೆಲ ಕಡೆ ಸಮಸ್ಯೆಯೂ ಇದೆ ಎಂದು ಮಾಜಿ ಸಚಿವ ಯೋಗೇಶ್ವರ್ (CP.Yogeshwar) ಒಪ್ಪಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಭಾಗದಲ್ಲಿ ಸರ್ವಿಸ್ ರಸ್ತೆ ಇಲ್ಲ. ವಾಹನ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಇಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರಿಗೆ ಗೊಂದಲ ಆಗುತ್ತಿದೆ. ಅಪಘಾತವಾದಾಗ ತುರ್ತು ಆಸ್ಪತ್ರೆಗೆ ತೆರಳಲು ರಸ್ತೆ ವ್ಯವಸ್ಥೆ ಇಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ. ಮೂರು ಕಿಲೋ ಮೀಟರ್ ಸುತ್ತಿ ಬರುವ ಅನಿವಾರ್ಯ ಇದೆ. ಇದನ್ನು ಓದಿ : – ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿ ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
ವಾಹನ ಸವಾರ (Vehicle riders) ರಿಗೆ ಇಂಧನ ವ್ಯವಸ್ಥೆ ಈ ರಸ್ತೆಯಲ್ಲಿ ಇಲ್ಲ. ರಾಷ್ಟ್ರೀಯ ಹೆದ್ದಾರಿ ರಸ್ತೆ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಮದ್ದೂರು, ರಾಮನಗರ ರಸ್ತೆಯಲ್ಲಿ ಕೆಲವೊಂದು ಲೋಪದೋಷಗಳಿವೆ. ಸರಿಪಡಿಸುವಂತೆ ಮಾನ್ಯ ಸಚಿವರಿಗೆ ಈ ವಿಚಾರ ಪ್ರಸ್ತಾಪನೆ ಮಾಡುತ್ತೇನೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ.
ಇದನ್ನು ಓದಿ : – ಸ್ಯಾಂಟ್ರೋ ರವಿ ಹೆಸರನ್ನ ನಾನು ಕೇಳೇ ಇಲ್ಲ – ಡಿ ಕೆ ಶಿವಕುಮಾರ್