ಆನೆ (Elephant) ಗೆ ಕಬ್ಬು (Sugarcane) ನೀಡಿದ ಲಾರಿ ಚಾಲಕ (Lorry driver) ನಿಗೆ ಭಾರೀ ಮೊತ್ತದ ದಂಡ (Fine) ವಿಧಿಸಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ನಡೆದಿದೆ. ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ಆನೆಗೆ ಲಾರಿ ಚಾಲಕ ಕಬ್ಬು ನೀಡಿದ್ದಾರೆ. ಲಾರಿ ಚಾಲಕನಿಗೆ ತಮಿಳುನಾಡು (Tamil nadu) ಅರಣ್ಯ ಇಲಾಖೆ ಬರೋಬ್ಬರಿ 75 ಸಾವಿರ ರೂ. ದಂಡ ವಿಧಿಸಿದೆ. ನಂಜನಗೂಡು ಮೂಲದ ಲಾರಿ ಚಾಲಕ ಸಿದ್ದರಾಜು ಎಂಬುವವರಿಗೆ ಅರಣ್ಯ ಇಲಾಖೆ ದಂಡ ಹಾಕಿದೆ.
ಚಾಮರಾಜನಗರ (Chamrajnagar) ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಎಸೆದಿದ್ದಾರೆ. ಇದನ್ನು ಕಂಡ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಾಲಕನನ್ನು ವಿಚಾರಿಸಿ ಆತನಿಗೆ ದಂಡ ಹಾಕಿದ್ದಾರೆ. ದಂಡ ಕಟ್ಟುವವೆರೆಗೂ ಲಾರಿ ಬಿಡುವುದಿಲ್ಲ ಎಂದು ಪೊಲೀಸರು (Police) ವಾರ್ನ್ ಮಾಡಿದ್ದರು. ನಂತರ ಲಾರಿ ಚಾಲಕ ಯಾವುದೇ ಪರ್ಯಾಯ ದಾರಿಯಿಲ್ಲದೇ ದಂಡ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕಬ್ಬಿನ ರುಚಿಗಾಗಿ ಆನೆಗಳು ಆಗಾಗ್ಗೆ ಲಾರಿಗಳನ್ನ ಅಡ್ಡ ಹಾಕುತ್ತವೆ. ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಆಸನೂರು ಭಾಗದಲ್ಲಿ ಇದು ಸಾಮಾನ್ಯವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : – ಬಿಜೆಪಿಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ 60 ರೌಡಿಗಳು! ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್