Cinema

ಮಧುರಕಾವ್ಯ ಟ್ರೈಲರ್ ದೇವರಾಜ್ ಬಿಡುಗಡೆ

ಒಂದೊಳ್ಳೆ ಪ್ರಯತ್ನ ಮಾಡಿದಾಗ ಒಳ್ಳೆಯ ಮನಸುಗಳೂ ಕೈಜೋಡಿಸುತ್ತವೆ. ಆಯುರ್ವೇದ ಚಿಕಿತ್ಸೆಯ ಅಳಿವು ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೆಂದೇ ಚಲನಚಿತ್ರ ನಿರ್ದೇಶನ ಮಾಡಿರುವ ಮಧುಸೂದನ್ ಅವರಿಗೆ ಹಿರಿಯನಟ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ಸಹಕಾರ ನೀಡಿದ್ದಾರೆ. ಆಯುರ್ವೇದದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲೆಂದೇ, ಸ್ವತಃ ಆಯುರ್ವೇದ ವೈದ್ಯರಾದ ಮಧುಸೂದನ್ ಅವರು ಮಧುರಕಾವ್ಯ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಅಭಿನಯಿಸಿದ್ದಾರೆ.ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ನಂತರ ಮಾತನಾಡಿದ ದೇವರಾಜ್, ಎಲ್ಲೂ ಸುಳಿವನ್ನು ಬಿಟ್ಟುಕೊಡದೆ ಟ್ರೈಲರನ್ನು ಇಂಟರೆಸ್ಟಿಂಗ್ ಆಗಿ ಮಾಡಿದ್ದಾರೆ. ನಿರ್ದೇಶಕರು ಆಯುರ್ವೇದ ಡಾಕ್ಟರ್ ಅಂತ ಕೇಳಿ ತುಂಬಾ ಸಂತೋಷವಾಯಿತು, ಕಥೆ ಬಗ್ಗೆ ಕೇಳಿದೆ, ನಿಜಕ್ಕೂ ಒಳ್ಳೆಯ ಆಲೋಚನೆ. ಅಲೋಪತಿ ಬಗ್ಗೆ ಮುಂಚೆ ಅದೆಷ್ಟು ನಂಬಿಕೆ ಇತ್ತು. ಅದೀಗ ಕಡಿಮೆಯಾಗ್ತಾ ಇದೆ. ಆಯುರ್ವೇಧ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಜನ ಕೂಡ ಅತ್ತ ವಾಲಿದ್ದಾರೆ‌. ಇವರ ಇಡೀ ಫ್ಯಾಮಿಲಿ ನಾಟಿ ವೈದ್ಯರು ಅಂತ ಗೊತ್ತಿರಲಿಲ್ಲ. ಅದನ್ನೇ ಮುಂದುವರೆಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು.

ನಾಯಕ ಕಂ ನಿರ್ದೇಶಕ ಮಧುಸೂದನ್ ಮಾತನಾಡುತ್ತ ನಮ್ಮ ಚಿತ್ರಕ್ಕೆ ಹರಸಲು ದೇವರಾಜ್ ಅವರು ಬಂದಿರೋದು ನನ್ನ ಅದೃಷ್ಯ. ಒಳ್ಳೆಯ ಉದ್ದೇಶಕ್ಕೆ ಯಾವಾಗಲೂ ಪ್ರೋತ್ಸಾಹ ಇದೆ ಅಂತ ಗೊತ್ತಾಯ್ತು. ಆ ದೇವರು ನನ್ನನ್ನು ಸಿನಿಮಾ ಮಾಡುವ ಲೆವೆಲ್ ಗೆ ತಂದಿದ್ದಾರೆ. ಜೀವಭಯ ಎಲ್ಲರಿಗೂ ಇರುತ್ತೆ. ಮಾತ್ರೆಗಳನ್ನು ತಿಂದರೆ ಏನಾಗಿತ್ತೋ ಅಂತ ಭಯ ಇದೆ. ಹಣಕ್ಕೋಸ್ಕರ ಕಂಪನಿಗಳು ಜನರನ್ನು ಯಾವರೀತಿ ಮೋಸಪಡಿಸುತ್ತಾರೆ ಅಂತ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ. ಆಯುರ್ವೇದದಲ್ಲಿ ಸರ್ವರೋಗಗಳಿಗೂ ಪರಿಹಾರವಿದೆ.ಹಣ ಎಂಬುದನ್ನು ಬದಿಗಿಟ್ಟು ಸಮಾಜಸೇವೆ ಅಂತ ಈ ಸಿನಿಮಾ ಮಾಡಿದ್ದೇವೆ. ಎಲ್ಲರೂ ಬಂದುನೋಡಿ ತಿಳಿದುಕೊಳ್ಳಲಿ ಅನ್ನುವುದೇ ನಮ್ಮ ಉದ್ದೇಶ. ಬೆಸ್ಟ್ ಫುಡ್ ಈಸ್ ಬೆಸ್ಟ್ ಮೆಡಿಸಿನ್, ನಮ್ಮ ಬಹುತೇಕ ಖಾಯುಲೆಗಳಿಗೆ ಹಿತ್ತಲ ಗಿಡದಲ್ಲೇ ಮದ್ದಿದೆ. ಹಿತ್ತಲ ಗಿಡವನ್ನು ಹೇಗೆ ಬಳಸಿಕೊಳ್ಳಬೇಕು. ಅಲ್ಲದೆ ಒತ್ತಡದಿಂದಲೇ ರೋಗಗಳು ಹೇಗೆ ಹೆಚ್ಚಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಆಹಾರಕ್ಕೆ ಮೀರಿದ ಔಷಧಿ ಬೇರೊಂದಿಲ್ಲ, ಹಣ ಮಾಡಿಕೊಳ್ಳಲು ನಿಮ್ಮ ಜೀವಕ್ಕೆ ಕೈಹಾಕ್ತಿದ್ದಾರೆ ಎಂದು ಹೇಳಿದರು.

ಅಲೋಪಥಿ ವೈದ್ಯರು ಹಣದಾಸೆಗಾಗಿ ನಾಟಿ ವೈದ್ಯ ಪದ್ದತಿಯನ್ನು ಹೇಗೆಲ್ಲಾ ಹತ್ತಿಕ್ಕುತ್ತಿದ್ದಾರೆ, ಪಾರಂಪರಿಕವಾಗಿ ಜನಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಯಾವರೀತಿ ತುಳಿಯುತ್ತಿದ್ದಾರೆ ಎಂಬುದನ್ನೂ ಚಿತ್ರದಲ್ಲಿ ಹೇಳಲಾಗಿದೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದಾರೆ. ಮಧುಸೂದನ್ ಕ್ಯಾತನಹಳ್ಳಿ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ. ನಾಯಕನ ತಾಯಿಯಾಗಿ ರಂಗಭೂಮಿ ನಟಿ ಯಶೋಧ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜಕುಮಾರ್ ನಾಯಕ್ ನಟಿಸಿದ್ದಾರೆ. ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆಯ ೪ ಹಾಡುಗಳು ಚಿತ್ರದಲ್ಲಿವೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!