ರಾಹುಲ್ ಪವನ್ ಎಂಬುವರನ್ನು ನಟಿ ಅಭಿರಾಮಿ, ಮದುವೆ ಆಗಿದ್ದಾರೆ. 14 ವರ್ಷ ಮದುವೆ ಆಗಿದರೂ ಈ ಜೋಡಿಗೆ ಮಕ್ಕಳು ಇರಲಿಲ್ಲ. ಹೀಗಾಗಿ ನಟಿ ಅಭಿರಾಮಿ, ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿರುವ ವಿಷಯವನ್ನು ಮೇ 14 ರಂದು ವಿಶ್ವ ತಾಯಂದಿರ ದಿನದಂದು ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಪ್ರೀತಿಯ ಸ್ನೇಹಿತರೇ, ನಾನು ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತದೆ. ನಾವು ಈಗ ಕಲ್ಕಿ ಎಂಬ ಹೆಣ್ಣು ಮಗುವಿನ ಪೋಷಕರಾಗಿದ್ದೇವೆ.
ಈ ಮಗು ನಮ್ಮ ಜೀವನದಲ್ಲಿ ಬಂದ ನಂತರ ಎಲ್ಲವೂ ಬದಲಾವಣೆ ಆಗಿದೆ. ತಾಯಂದಿರ ದಿನವನ್ನು ಸೆಲೆಬ್ರೇಟ್ ಮಾಡಲು ಬಹಳ ಖುಷಿಯಾಗುತ್ತದೆ. ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಇರಲಿ” ಎಂದು ಅಭಿರಾಮಿ ಹೇಳಿಕೊಂಡಿದ್ದಾರೆ.