ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗಿದ್ದರೂ ಸಹ ಅಂತ್ಯಕ್ರಿಯೆಗೊಂಡಂತಹ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪುಣ್ಯಭೂಮಿಗೆ ಕನಿಷ್ಠ 20 ಗುಂಟೆಗಳ ಜಾಗ ನೀಡಬೇಕೆಂದು ಕೋರಿ ಡಾ.ವಿಷ್ಣು ಸೇನಾ ಸಮಿತಿಯು 18.09.2015 ರ ಕೇಸ್ .RD/308/LJB/2015 ರಲ್ಲಿ ಕೇಸಿನಲ್ಲಿ implead ಆಗಿ ತಮ್ಮ ವಾದವನ್ನು ಮಂಡಿಸಿತ್ತು. ಜೊತೆಗೆ ಹಿರಿಯ ನಟ ಬಾಲಕೃಷ್ಣ ಅವರಿಗೆ ನೀಡಿರುವಂತಹ ಜಮೀನು ಅರಣ್ಯ ಇಲಾಖೆಗೆ ಒಳಪಟ್ಟಿರುತ್ತದೆ ಮತ್ತು ಅವರ ಕಾಲ ನಂತರದಲ್ಲಿ ಅವರ ಮಕ್ಕಳು/ಮೊಮ್ಮಕ್ಕಳು ಹತ್ತು ಎಕರೆಯನ್ನು ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುತ್ತಾರೆ ಎಂಬ ವಿಷಯವನ್ನು ಪ್ರಸ್ತಾಪಿಸಿತ್ತು.
ಈ ಕುರಿತು ವಾದ ವಿವಾದ ಆಲಿಸಿದ ನ್ಯಾಯಾಲಯವು ” ಈ ಸಂಬಂಧ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿಗೆ ಹಕ್ಕಿರುವುದಿಲ್ಲವೆಂದೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ಸರ್ಕಾರದ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ತಿಳಿಸಿತು.
ನ್ಯಾಯಾಧೀಶರ ಅಭಿಪ್ರಾಯದಂತೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ನಟ ದಿ.ಬಾಲಕೃಷ್ಣ ಅವರ ಕಲಾಸೇವೆಗೆ ಮೆಚ್ಚಿ ಸರ್ಕಾರವು ನೀಡಿದ 20 ಎಕರೆಯ ಭೂಮಿಯನ್ನು ಅವರ ಮಕ್ಕಳು ಖಾಸಗಿ ಸ್ವತ್ತಿನಂತೆ ಭಾವಿಸಿ ಹತ್ತು ಎಕರೆಯನ್ನು ಮಾರಾಟ ಮಾಡಿರುತ್ತಾರೆ. ಇದು ಸರ್ಕಾರದ ಭೋಗ್ಯ ಹಕ್ಕುಗಳ ಕಾಯ್ದೆಗೆ ವಿರುದ್ದವಾಗಿರುತ್ತದೆ. ಮತ್ತು ಸದರಿ ಜಮೀನು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಜಾಗದ ಅನುದಾನ ಸಹ ತಪ್ಪಾಗಿದ್ದು ಅದನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸುವ ನಿರ್ಧಾರಕ್ಕೆ ಡಾ.ವಿಷ್ಣು ಸೇನಾ ಸಮಿತಿಯು ಬಂದಿದೆ. ಆ ನಿಟ್ಟಿನಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆ ಮತ್ತು ಹೋರಾಟಕ್ಕೆ ಡಾ.ವಿಷ್ಣು ಸೇನಾ ಸಮಿತಿಯು ಚಾಲನೆ ನೀಡಲಿದೆ.