ನಟ ಕಿಚ್ಚ ಸುದೀಪ್ (Sudeep) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK.Shivakumar) ಭೇಟಿ ವಿಚಾರ ಕುರಿತಂತೆ ಮುಳಬಾಗಿಲು ತಾಲೂಕಿನ ಕಪ್ಪಲಮಡಗೂ ಗ್ರಾಮದ ಬಳಿ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವುದೇ ರಾಜಕೀಯ ವಿಚಾರವನ್ನು ಚರ್ಚೆ ಮಾಡಿಲ್ಲ. ಚಿತ್ರ ರಂಗದ ಸಮಸ್ಯೆ ಕುರಿತು ಪ್ರಣಾಳಿಕೆ ಮಾಡಲು ಚರ್ಚೆ ಮಾಡಿದ್ದೇವೆ. ಅಂಬರೀಷ್ (Ambareesh) , ಪುನೀತ್, ವಿಷ್ಣುವರ್ಧನ್ ರೀತಿ ಸುದೀಪ್ ಉತ್ತಮ ನಾಯಕ ನಟ.
ಕಾಂಗ್ರೆಸ್ (Congress) ಪರ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ನಾನು ರಾಜಕೀಯ ಆಹ್ವಾನ ನೀಡಿಲ್ಲ,ಅನೇಕ ವಿಚಾರವಾಗಿ ಸಲಹೆ ಪಡೆಯಲು ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ಅವರು ನಮ್ಮ ಖಾಸಗಿ ಕಾರ್ಯಕ್ರಮಕ್ಕೆ ಬರ್ತಿದ್ದಾರೆ,ಒಳ್ಳೆ ಸ್ನೇಹಿತ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ನಟ ಸುದೀಪ್ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಕಿಚ್ಚ ಸುದೀಪ್ ಕಾಂಗ್ರೆಸ್ ಗೆ ಹೋಗಲ್ಲ
ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಗೆ ಹೋಗಲ್ಲ. ನನ್ನ ಪ್ರಕಾರ ಸುದೀಪ್ ಇನ್ನೂ ಕಾಂಗ್ರೆಸ್ ಗೆ ಸೇರಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ತಿಳಿಸಿದ್ದಾರೆ. ಸುದೀಪ್ ರಾಜ್ಯದ ಉತ್ತಮ ನಾಯಕ ನಟ (Hero) . ಸುದೀಪ್, ದರ್ಶನ್ ಯಾವುದೇ ಪಕ್ಷಕ್ಕೆ ಸೇರಿದ್ರೂ ಪಕ್ಷಕ್ಕೆ ಒಳ್ಳೆಯದಾಗುತ್ತೆ. ಅವರು ಏನ್ ತೀರ್ಮಾನ ತಗೊಳ್ತಾರೆ ನೋಡೋಣ ಎಂದು ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ : – ಮದ್ಯದಂಗಡಿ ಮುಂದೆ ಬಿಡಾಡಿ ಹಸು ಕಟ್ಟಿ ಹಾಕಿ – ಬಿಜೆಪಿ ನಾಯಕಿ ಉಮಾಭಾರತಿ ಪ್ರತಿಭಟನೆ