ಪುಣ್ಯ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪವನ್ ಕುಮಾರ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು.”ಸೂಪರ್ ಹೀರೋ ” ಕಾನ್ಸೆಪ್ಟ್ ನ ಈ ಚಿತ್ರಕ್ಕೆ “ದಿ ಎಂಡ್” ಎಂದು ಹೆಸರಿಡಲಾಗಿದೆ. ಚಿತ್ರದ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಅನಾವರಣಗೊಳಿಸಿದರು. ಕನ್ನಡಪರ ಹೋರಾಟಗಾರ ಭೀಮಶಂಕರ್ ಅವರು ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು.
“ದಿ ಎಂಡ್” ಇದು ಕನ್ನಡ ಪ್ರಥಮ “ಸೂಪರ್ ಹೀರೋ” ಚಿತ್ರ ಎಂದು ಮಾತನಾಡಿದ ನಿರ್ದೇಶಕ ಪವನ್ ಕುಮಾರ್, “ಸೂಪರ್ ಹೀರೋ” ಎಂದರೆ ವಿಶೇಷ ಶಕ್ತಿಯುಳ್ಳವನು ಎಂದು. ಉದಾಹರಣೆಗೆ ಹನುಮಂತ. ಪುರಾಣದಲ್ಲಿ ಬರುವ ಸಪ್ತ ಚಿರಂಜೀವಿಗಳನ್ನು ಆದರ್ಶವಾಗಿಟ್ಟುಕೊಂಡು. ಈ ಚಿತ್ರದ ಕಥೆ ಸಿದ್ದವಾಗಿದೆ. ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಬೆಂಗಳೂರು, ಮಂಗಳೂರು, ಗೋವಾ, ಬಾದಾಮಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಮೇ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ರವಿಶೇಖರ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಪವಿತ್ರ ರಾಜ್, ಕೆ.ಎಸ್. ಶ್ರೀಧರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಎರಡು ವಿಶೇಷ ಪಾತ್ರಗಳಿದ್ದು, ಹೆಸರಾಂತ ನಟ ಅನಂತನಾಗ್ ಹಾಗೂ ನಟಿ ರಾಗಿಣಿ ಅವರು ಆ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ನನ್ನಗಿದೆ. ಈ ಕುರಿತು ಮಾತುಕತೆ ನಡೆಯುತ್ತಿದೆ. ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ ಹಾಗೂ ರವಿ ಆತ್ಮರಾಮ್ ಸಂಕಲನ ಈ ಚಿತ್ರಕ್ಕಿದೆ.
“ದಿ ಎಂಡ್” ಚಿತ್ರಕ್ಕೆ “PREAMBLE” ಎಂಬ ಅಡಿಬರಹವಿದೆ. ಈ ಚಿತ್ರ ಐದು ಭಾಗಗಳಲ್ಲಿ ಬರಲಿದೆ. “PREAMBLE” ಅಂದರೆ ಪೀಠಿಕೆ ಎಂದು ಅರ್ಥ. ಚಿತ್ರವನ್ನು ಕನ್ನಡ ಸೇರಿದಂತೆ ಒಂಭತ್ತು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ. ಈ ಚಿತ್ರದಲ್ಲಿ VFX ಬಹಳ ಮುಖ್ಯಪಾತ್ರವಹಿಸಿದೆ. oriented Chitra 3 ವಿಶೇಷ ಅನಿಮೇಟೆಡ್ studios e ಚಿತ್ರಕ್ಕಾಗಿ vfx ಮಾಡುತ್ತಿದ್ದಾರೆ ಎಂದರು. ತಮಿಳಿನಲ್ಲಿ ಒಂದು ಚಿತ್ರದಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಮೊದಲ ಚಿತ್ರ. “ಸೂಪರ್ ಹೀರೋ” ಆಗಿ ನಟಿಸಿದ್ದೇನೆ ಎಂದು ನಾಯಕ ರವಿಶೇಖರ್ ತಿಳಿಸಿದರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಪವಿತ್ರರಾಜ್. ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಬಗ್ಗೆ ಸಂಗೀತ ನಿರ್ದೇಶಕ ಅರುಣ್ ಆಂಡ್ರ್ಯೂ ಮಾಹಿತಿ ನೀಡಿದರು.