ಸ್ಯಾಂಡಲ್ವುಡ್ ಸಲಗ, ದುನಿಯಾ ವಿಜಿಗೆ ಇಂದು ಬರ್ತ್ಡೆ ಸಂಭ್ರಮ.. 50ನೇ ವಸಂತಕ್ಕೆ ಕಾಲಿಟ್ಟಿರೋ ದುನಿಯಾ ವಿಜಿ ತಮ್ಮ ಬರ್ತ್ಡೆಯನ್ನ ಸಾಕಷ್ಟು ಸ್ಪೆಷಲ್ ಸೆಲೆಬ್ರೇಟ್ ಮಾಡುವ ಮೂಲಕ, ಸಾಕಷ್ಟು ಮಂದಿಗೆ ಸ್ಪೂರ್ತಿಯಾಗಿದ್ದಾರೆ,. ಇದರ ಜೊತೆ ಜೊತೆಗೆ ಅವರ ಅಭಿಮಾನಿಗಳಿಗೆ ಡಬ್ಬಲ್ ಟ್ರೀಟ್ ಕೊಟ್ಟಿದ್ದಾರೆ..
ಸಾಮಾನ್ಯ ಹುಡುಗನೊಬ್ಬ ಯಾವುದೇ ಗಾಡ್ ಫಾದರ್ ಇಲ್ಲಿದೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು, ಸೂಪರ್ ಸ್ಟಾರ್ ಪಟ್ಟ ಏರೋದಿದಿಯಲ್ಲಾ ಅದು ಸಾಮಾನ್ಯ ಮಾತಲ್ಲಾ.. ಆದ್ರೆ ಅದನ್ನ ಸಾಧಿಸಿ ತೋರಿಸಿದ ಕೀರ್ತಿ ದುನಿಯಾ ವಿಜಿಯವರದ್ದು,, ಸಣ್ಣ ಪುಟ್ಟ ಪಾತ್ರಗಳನ್ನ ಮಾಡ್ತಾ ಬಂದು, ಇಂದು ಕರುನಾಡಿನ ಸ್ಟಾರ್ ನಟ.. ಅಷ್ಟೇ ಯಾಕೆ ಪರಭಾಷೆಯಲ್ಲೂ ಕರುನಾಡ ಕೀರ್ತಿ ಪತಾಕೆಯನ್ನ ಹರಡಿರೋ ಹೆಮ್ಮೆಯ ಕನ್ನಡಿಗ..
ತಂದೆ ತಾಯಿಯ ಗುಡಿಯ ಮುಂದೆ ಬರ್ತ್ಡೆ ಸೆಲಬ್ರೇಷನ್ ಅರ್ಥಂಗಭಿತವಾಗಿ ಹುಟ್ಟಹಬ್ಬ ಆಚರಿಸಿದ ದುನಿಯಾ ವಿಜಿ…
ಅವರ ವೃತ್ತಿ ಬದುಕು ಮಾತ್ರ ನಮಗೆ ಸ್ಪೂರ್ತಿ ಅಲ್ಲಾ.. ಅವರ ಇಂದಿನ ನಡೆಯು ಕೂಡ, ಪ್ರತೀಯೊಬ್ಬರಿಗೂ ಇನ್ಸ್ಪಿರೇಷನ್ಸ್.,. ತಂದೆ ತಾಯಿಯನ್ನ ಹೇಗೆ ನೋಡ್ಕೊಬೇಕು, ಅವರಿಗೆ ಹೇಗೆ ಗೌರವ ಕೊಡ್ಬೇಕು.. ಅನ್ನೋದನ್ನ ಅವರನ್ನ ನೋಡಿ ಕಲೀಬೇಕು.. ವಯಸ್ಸಾದ ತಂದೆ ತಾಯಿಗೆ ಒಂದು ಹೊತ್ತು ಊಟ ಹಾಕಲು ಯೋಚಿಸೊ ಲಕ್ಷಾಂತರ ಮಂದಿ ಇದ್ದಾರೆ.. ಆದ್ರೆ ದುನಿಯಾ ವಿಜಿ ದೇವರ ಬಳಿ ಹೋಗಿರೋ ತಮ್ಮ ತಂದೆ ತಾಯಿಗೆ ಗುಡಿಯನ್ನ ಕಟ್ಟಿಸಿ, ಅವರ ಧ್ಯಾನದಲ್ಲಿದ್ದಾರೆ. ಈ ಭಾರಿ ತಮ್ಮ ಹುಟ್ಟಹಬ್ಬವನ್ನು ಸಹ ಆ ದೇವರ ಗುಡಿಯ ಮುಂದೆ ಆಚರಿಸಿಕೊಳ್ಳೋ ಮೂಲಕ ಕೋಟ್ಯಾಂತರ ಮಂದಿಗೆ ಸ್ಪೂರ್ತಿಯಾಗಿದ್ದಾರೆ..