ನವದೆಹಲಿ : ಭಾರತೀಯ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ಹೇಳಿದ್ದು, ಕೆಲ ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಶೋಯೆಬ್ ಮಲಿಕ್ ಅವರು ಪಾಕ್ ನಟಿ ಸನಾ ಜಾವೇದ್ ಅವರೊಂದಿಗೆ ವಿವಾಹವಾದ ಬಳಿಕ ಸುದ್ದಿ ಹೊರಬೀಳುತ್ತಿದ್ದಂತೆ ಸಾನಿಯಾ ಕುಟುಂಬ ಸ್ಫಷ್ಟನೆ ನೀಡಿದೆ.
ಸಾನಿಯಾ ಯಾವಾಗಲೋ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿದ್ದಾಳೆ. ಆದರೆ ಶೋಯೆಬ್ ರಿಂದ ವಿಚ್ಛೇದನ ಪಡೆದು ಕೆಲವು ತಿಂಗಳಾಗಿವೆ. ಈಗ ಅದರ ಬಗ್ಗೆ ಮಾತನಾಡುವ ಸಂದರ್ಭ ಬಂದಿದೆ ಎಂದು ಹೇಳಿದೆ. ಅಲ್ಲದೇ ಸಾನಿಯಾ ಸಹ ಶೋಯೆಬ್ ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾಳೆ ಎಂಬುದಾಗಿ ಕುಟುಂಬ ತಿಳಿಸಿದೆ.
ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ಮದುವೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ, ಪಾಕಿಸ್ತಾನದಲ್ಲಿರುವ ಸಾನಿಯಾ ಮಿರ್ಜಾ ಅಭಿಮಾನಿಗಳು ಸಾನಿಯಾ ಬೆಂಬಲಿಸಿ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಪ್ರೇಮ ವಿವಾಹದಲ್ಲಿ ದೀರ್ಘಕಾಲದ ನಂಬಿಕೆ ಇರುವುದಿಲ್ಲ.
ಅಲ್ಲಾಹು ನಿಮಗೆ ಒಳ್ಳೆಯದು ಮಾಡಲಿ, ಇವರಿಗಿಂತಲೂ ಹೆಚ್ಚಿನದ್ದನ್ನು ಕೊಡಲಿ ಎಂದಷ್ಟೇ ಈಗ ನಾವು ಕೇಳಿಕೊಳ್ಳಬಹುದು ಎಂದರೆ, ಇನ್ನೂ ಕೆಲವರು ಶೋಯೆಬ್-ಸನಾ ವಿವಾಹಕ್ಕೆ ಅಭಿನಂದನೆಗಳು ಆದ್ರೆ ಸಾನಿಯಾ ಅವರ ಹೃದಯವನ್ನು ನುಚ್ಚುನೂರು ಮಾಡಿದ್ದು ನೋವಿನ ಸಂಗತಿ ಎಂದು ಬರೆದುಕೊಂಡಿದ್ದಾರೆ.