ಮನೆ ಸಹಾಯಕನಿಂದಲೇ ಜಮ್ಮು- ಕಾಶ್ಮೀರ ಕಾರಾಗೃಹ ಡಿಜಿ ಹತ್ಯೆ..!

ಜಮ್ಮು ಮತ್ತು ಕಾಶ್ಮೀರದ ಕಾರಾಗೃಹಗಳ ಮಹಾನಿರ್ದೇಶಕ ಎಚ್‌ಕೆ ಲೋಹಿಯಾ ಅವರ ಬರ್ಬರ ಹತ್ಯೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಜಮ್ಮು- ಕಾಶ್ಮೀರದ ಗೃಹ ಸಹಾಯಕ ಯಾಸಿರ್ ಅಹ್ಮದ್ ರಾಂಬನ್ (Yasir Ahmad Ramban) ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಕಾರಾಗೃಹಗಳ ಮಹಾನಿರ್ದೇಶಕ ಎಚ್‌ಕೆ ಲೋಹಿಯಾ ಅವರ ಬರ್ಬರ ಹತ್ಯೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಜಮ್ಮು- ಕಾಶ್ಮೀರದ ಗೃಹ ಸಹಾಯಕ ಯಾಸಿರ್ ಅಹ್ಮದ್ ರಾಂಬನ್ (Yasir Ahmad Ramban) ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.


ಹತ್ಯೆಯ ಪ್ರಮುಖ ಆರೋಪಿ ಅವರ ಗೃಹ ಸಹಾಯಕನೇ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯ ಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು ಆತನ ಪತ್ತೆಹಚ್ಚಲು ಸಾರ್ವಜನಿಕರ ಸಹಾಯ ಕೋರಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಆಫ್-ಶೂಟ್ ಎಂದು ಹೇಳಲಾದ ಉಗ್ರಗಾಮಿ ಸಂಘಟನೆ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫೋರ್ಸ್ (PAFF) ಪೊಲೀಸ್ ಅಧಿಕಾರಿಯ ಹತ್ಯೆಯ ಹೊಣೆ ಹೊತ್ತುಕೊಂಡಿದೆ.

ಇದನ್ನೂ ಓದಿ :- ಮನೆಗೋಡೆ ಕುಸಿದು ಅವಶೇಷಗಳಡಿ ಸಿಲುಕಿದ್ದ ಮಹಿಳೆಯ ರಕ್ಷಣೆ


ಕಳೆದ ಆಗಸ್ಟ್ 3 ರಂದು ಕಾರಾಗೃಹ ಡಿಜಿ ಆಗಿ ನೇಮಕಗೊಂಡ ಲೋಹಿಯಾ ನಿನ್ನೆ ಸಂಜೆ ಜಮ್ಮುವಿನ ಉಧೇವಾಲಾ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಕೊಲೆಯಾಗಿದ್ದಾರೆ. ಅವರು 1992ರ ವಿಭಾಗದ ಐಪಿಎಸ್ ಅಧಿಕಾರಿಯಾಗಿದ್ದರು.

ಇದನ್ನೂ ಓದಿ :- https://rajnewskannada.in/breaking-news/pm-modi-mandatory-conduct-certificate-for-journalists-at-prime-ministers-program-controversy-brought-by-strange-order/

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!