ಬೆಂಗಳೂರು : ನಗರದ ರಸ್ತೆಗಳಲ್ಲಿ ಪುಂಡರ ಪುಂಡಾಟಿಕೆ ನಿಂತಿಲ್ಲ. ಪೊಲೀಸರು ಎಷ್ಟೆ ನೀಗಾ ವಹಿಸಿದ್ರು ಕೂಡ ವಿಲ್ಹಿಂಗ್ ಶೋಕಿ ಮಾತ್ರ ನಿಂತಿಲ್ಲ.
ಗ್ಯಾಂಗ್ ಕಟ್ಟಿಕೊಂಡು ಸಿಕ್ಕ ಸಿಕ್ಕ ಕಡೆ ವಿಲ್ಹಿಂಗ್ ಮಾಡುವ ಕಿಡಿಗೇಡಿಗಳು, ವಿಲ್ಹಿಂಗ್ ವಿಡೀಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಅವ್ಯಾಚ ಶಬ್ದಗಳ ಆಡಿಯೋ ಮಿಕ್ಸ್ ಮಾಡಿ ವಿಡಿಯೋ ಎಡಿಟಿಂಗ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿಗೇಡಿಗಳ ವಿಲ್ಹಿಂಗ್ ಗೆ ಅಮಾಯಕರು ಬಲಿಯಾಗ ಬೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪುಂಡರ ವಿಲ್ಹಿಂಗ್ ಮಾಡುವ ವೇಳೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಬಂದಿದೆ.