ಬೀದರ್ : ಒಂದು ಕೋಟಿಗೂ ಅಧಿಕ ಮೌಲ್ಯದ ಮಾಣಿಕ್ ಚಂದ್ ಹಾಗೂ ವಿಮಲ್ಪಾನ ಮಸಲಾ ಜಪ್ತಿ ಮಾಡಿದ ಪೋಲಿಸರು.
ಬೀದರ್ ಹೊರವಲಯದಲ್ಲಿರುವ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ಗೋದಾಮವೊಂದರ ಮೇಲೆ ನ್ಯೂ ಟೌನ್ ಪೊಲೀಸರಿಂದ ಕಾರ್ಯಾಚರಣೆ. ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಒಂದು ಕೋಟಿ ಎರಡು ಲಕ್ಷ ಐವತ್ತೋಂದು ಸಾವಿರ ಐದನೂರು(1,02,51,500) ಮೌಲ್ಯದ ವಸ್ತುಗಳನ್ನ ಸೀಜ್ ಮಾಡಿದ ಪೊಲೀಸರು.
ಕಾರ್ಯಾಚರಣೆಯಲ್ಲಿ ಮಾಣಿಕಚಂದ್ ಹಾಗೂ ವಿಮಲ್ ಪಾನ್ ಮಸಾಲಾ,ಸಾಲಾರ ಪಾನ್ ಮಸಲಾ ಜೊತೆಗೆ ಪೌಚ್ ಪ್ಯಾಕೇಟ್ ತಯಾರಿಸುವ ತಲಾ 80 ಸಾವಿರ ಮೌಲ್ಯದ ಒಟ್ಟು ಹದಿಮೂರು ಯಂತ್ರಗಳು, 25ಕ್ವಿಂಟಾಲ್ ಅಡಿಕೆ ಪೂಡಿ ಸೇರಿ ಭಾರಿ ಪ್ರಮಾಣದಲ್ಲಿ ಪಾನ ಮಸಾಲಾ ಜಪ್ತಿ. ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಮಹೇಶ್ ಪಾಟೀಲ್ ಹಾಗೂ FSSIಅಧಿಕಾರಿ ಮನೋಹರ್ ಅವರ ಜೊತೆ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ.ಅನುಮತಿ ಇಲ್ಲದೆ ಪಾನ ಮಸಾಲ ತಯಾರಿಸಿ ಸಂಗ್ರಹಿಸಿಟ್ಟ ಖದೀಮರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಖುಸ್ರು ಹಾಗೂ ರಾಜು ಎಂಬುವರನ್ನ ಬಂಧಿಸಿದ ವಿಚಾರಣೆ ನಡೆಸಿದ ಪೊಲೀಸರು. ಎನ್ಟಿಪಿಎಸ್(NTPS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೀದರ್ ನ್ಯೂ ಟೌನ್ ಎಸ್ಪಿ ಚನ್ನಬಸವಣ್ಷ ಲಂಗೋಟೆಯವರ ಮಾರ್ಗದರ್ಶನದಲ್ಲಿ ಬೀದರ್ ವಿಭಾಗದ ಡಿವೈಎಸ್ಪಿ ಶಿವನಗೌಡ ಹಾಗೂ ಸಿಪಿಐ ವಿಜಯಕುಮಾರ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆದಿದೆ.