ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡು ಸಂಗ್ರಹಿಸಿ ಇರಿಸಿದ್ದ 500 ಕೆಜಿಗೂ ಹೆಚ್ಚು ಮಾದಕ ವಸ್ತುಗಳನ್ನು ಇಲಿಗಳು ತಿಂದು ಹಾಕಿವೆ ಎಂದು ಉತ್ತರ ಪ್ರದೇಶದ ಮಥುರಾ ಪೊಲೀಸರು ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ವಿಶೇಷ ಕೋರ್ಟ್ ಗೆ ಹೇಳಿದ್ದಾರೆ.
ಶೇರಗಡ ಮತ್ತು ಹೈವೇ ಪೊಲೀಸ್ ಠಾಣೆಗಳ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಡ್ರಗ್ಸ್ ಗಳನ್ನು ಇಲಿಗಳು ಖಾಲಿ ಮಾಡಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ಈ ವಿಚಿತ್ರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಮರಿಜುವನಾವನ್ನು ಹಾಜರುಪಡಿಸುವಂತೆ ಮಥುರಾ ಪೊಲೀಸರಿಗೆ ವಿಶೇಷ ನ್ಯಾಯಾಲಯವು ಈ ವರ್ಷದ ಆರಂಭದಲ್ಲಿ ಸೂಚಿಸಿತ್ತು. ಇದನ್ನೂ ಓದಿ : – ಸಮಂತಾ ಸಿನಿಮಾಗೆ ಸಂಕಷ್ಟ – ಕೋರ್ಟ್ ನಿಂದ ತಡೆಯಾಜ್ಞೆ
ಇಲಿಗಳು ಪೊಲೀಸರಿಗೆ ಹೆದರೊಲ್ಲ!
ಪೊಲೀಸ್ ಗೋದಾಮುಗಳಲ್ಲಿ ಸಂಗ್ರಹಿಸಿದ ಮಾದಕ ವಸ್ತುಗಳ ಹರಾಜು/ ನಾಶದ ಕುರಿತಂತೆ ಕೋರ್ಟ್ ಐದು ಅಂಶಗಳ ನಿರ್ದೇಶನಗಳನ್ನು ಕೂಡ ನೀಡಿದೆ. ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಕಾಲಮಿತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹಂಗಾಮಿ ಎಸ್ಎಸ್ಪಿ ಮಾರ್ತಾಂಡ್ ಪಿ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : – ಸಿಎಂ ಕ್ಷೇತ್ರದಲ್ಲಿ 51 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ – ಡಿ.ಕೆ. ಸುರೇಶ್