ತೆಲಂಗಾಣ ಪೊಲೀಸರಿಗೆ ಆಯ್ತು, ಈಗ ಬೆಂಗಳೂರು (BANGLORE) ಪೊಲೀಸರಿಗೆ ಚಾಲೆಂಜ್ ಆಗಿದ್ದಾನೆ ಕಳ್ಳ ಶೇಖಾವತ್. ನನ್ನ ಹಿಂದಿರೋ ಇಬ್ಬರು ಮಾಸ್ಟರ್ ಮೈಂಡ್ ನ ಹಿಡೀರಿ ನೋಡೋಣ ಅಂತ ಬೆಂಗಳೂರು ಪೋಲೀಸರಿಗೆ ಚಾಲೆಂಜ್ ಮಾಡಿದ್ದಾನೆ. ಆ ಇಬ್ಬರನ್ನು ಹಿಡಿದ್ರೆ ಇನ್ನೂ 30 ಹೈ ಅಂಡ್ ಕಾರ್ ಕೊಡ್ತೀನಿ ಎಂದು ಹೇಳಿದ್ದಾನೆ ಕಾರು ಕಳ್ಳ ಶೇಖಾವತ್. ಮಾರ್ಚ್ 16 ರಂದು ಸತ್ಯಜಿತ್ ಶೇಖಾವತ್ ನ ಬಂಧನವಾಗಿದೆ. ಈ ವೇಳೆ ಅಮೃತಹಳ್ಳಿ ಪೊಲೀಸರ ಸತತ ವಿಚಾರಣೆ ವೇಳೆ ಆಡಿ, ಬೆನ್ಜ್, ಬಿಎಂಡಬ್ಲ್ಯೂ (BMW) ಕಾರು ಕಳವು ಬಗ್ಗೆ ಈತ ಬಾಯಿಬಿಟ್ಟಿದ್ದ. ಈ ವೇಳೆ 21 ಐಷಾರಾಮಿ ಕಾರುಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ. ಮತ್ತಷ್ಟು ವಿಚಾರಣೆ ಮಾಡಿದಾಗ ನಗರ ಪೊಲೀಸರಿಗೆ ಮತ್ತೊಂದು ಚಾಲೆಂಜ್ ನೀಡಿದ್ದಾನೆ ಈ ಖತರ್ನಾಕ್ ಕಳ್ಳ.
ವಿಚಾರಣೆ ವೇಳೆ ಆ ಇಬ್ಬರು ಜೈಪುರದ ಮೋಸ್ಟ್ ವಾಂಟೆಡ್ ಡ್ರಗ್ಸ್ ಫೆಡ್ಲರ್ ಗಳು ಅನ್ನೋದು ತಿಳಿದು ಬಂದಿದೆ. ಭಜನ್ ಲಾಲ್ ಹಾಗೂ ಕಮಲ್ ರಾಣಾ ಡ್ರಗ್ ಪೆಡ್ಲರ್ ಗಳಾಗಿದ್ದಾರೆ. ಆ ಇಬ್ಬರ ಹೆಸರು ಹೇಳಿ ಅವರನ್ನ ಅರೆಸ್ಟ್ ಮಾಡಿದ್ರೆ ಕದ್ದ 30 ಐಶಾರಾಮಿ ಕಾರುಗಳು ಕೊಡ್ತೀನಿ ಅಂದಿದ್ದಾನೆ. ಸದ್ಯ ಜೈಪುರಕ್ಕೆ ತೆರಳಿರೋ ಅಮೃತಹಳ್ಳಿ ಪೊಲೀಸರ ವಿಶೇಷ ತಂಡ ಫೆಡ್ಲರ್ ಗಳ ಬಗ್ಗೆ ವಿಚಾರಣೆ ಮಾಡಿದಾಗ ಮತ್ತಷ್ಟು ವಿಚಾರಗಳು ಬಹಿರಂಗವಾಗಿದೆ. ಆ ಇಬ್ಬರು ಫೆಡ್ಲರ್ ಗಳು ರಾಜಸ್ಥಾನ ಹಾಗೂ ಮುಂಬೈ ಪೊಲೀಸರ ಲೀಸ್ಟ್ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳು. ವಿಚಾರ ತಿಳಿದಿದ್ದೇ ಜೈಪುರ ಹಾಗೂ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಜೈಪುರ(JAIPURA)ಹಾಗೂ ಮುಂಬೈ (MUMBAI) ಪೊಲೀಸರು ಶೇಖಾವತ್ ನ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಸಿದ್ದತೆ ನಡೆಸಿದ್ದಾರೆ. ಸದ್ಯ ಶೇಖಾವತ್ ಮೊಬೈಲ್ ರಿಟ್ರೀವ್ ಮಾಡಲು ಎಫ್‌ಎಸ್ಎಲ್‌ಗೆ ರವಾನೆ ಮಾಡಲಾಗಿದೆ. ಶತಾಯಗತಾಯ ಇಬ್ಬರು ಫೆಡ್ಲರ್ ಗಳನ್ನು ನಾವೇ ಹಿಡಿಬೇಕು ಅಂತ ಪಣ ತೊಟ್ಟಿರೋ ಬೆಂಗಳೂರು ಖಾಕಿಗೆ ಜೈಪುರ ಹಾಗೂ ಮುಂಬೈ ಪೊಲೀಸರಿಗಿಂತ ಅಲರ್ಟ್ ಆಗಿರಲು ಹಿರಿಯ ಅಧಿಕಾರಿಗಳ ಸೂಚನೆ ನೀಡಿದ್ದಾರೆ. ಮೊಬೈಲ್ ರಿಟ್ರೀವ್ ಆಗಿದ್ದೇ ಇಬ್ಬರು ಫೆಡ್ಲರ್ ಗಳ ಬಂಧನ ಮಾಡ್ತೀವಿ ಅಂತಿದ್ದಾರೆ ಅಮೃತಹಳ್ಳಿ ಪೊಲೀಸರು.
ಇದನ್ನೂ ಓದಿ – ಕೋರಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳು ಅರೆಸ್ಟ್