ನಿನ್ನೆ ಅನ್ನಪೂರ್ಣೇಶ್ವರಿ ನಗರದ MNC ಅಕಾಡೆಮಿಯಲ್ಲಿ ಜಯಂತ್(13), ಮೋಹನ್(13) ಎಂಬ ಇಬ್ಬರು ಬಾಲಕರು ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೃತಪಟ್ಟಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಆ ಬಾಲಕರ ಮೃತದೇಹ ಇಟ್ಟು ಇಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ ಸೆಕ್ಯೂರಿಟಿ ಗಾರ್ಡ್ ಗಳನ್ನ ಮಾತ್ರ ಬಂಧನ ಮಾಡಲಾಗಿದ್ದು, ಪೊಲೀಸರು ಆರೋಪಿಗಳ ಪರವಾಗಿದ್ದಾರೆ. ಇದರ ವಿರುದ್ಧ ಹೋರಾಡಿದ್ರೆ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಕೋಣನಕುಂಟೆ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್ ನಮ್ಮ ಲಿಮಿಟ್ಸ್ ಗೆ ಮೃತದೇಹ ತರದಂತೆ ತಡೆಯುತ್ತಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ :- ನಾನ್ಯಾರಿಗೂ ಹೆದರಲ್ಲ… ಯಾರಿಗೂ ಬಗ್ಗಲ್ಲ ಗಂಡು ಮೆಟ್ಟಿದ ನಾಡಲ್ಲಿ ಹುಟ್ಟಿದವನು ನಾನು – ಜನಾರ್ದನ ರೆಡ್ಡಿ
ಸ್ವಿಮ್ಮಿಂಗ್ ಪೂಲ್ ಬಳಿ ಮೃತದೇಹವಿಟ್ಟು ಪ್ರತಿಭಟನೆಗೆ ಮುಂದಾಗಿದ್ದ ಕುಟುಂಬಸ್ಥರನ್ನ ಜರಗನಹಳ್ಳಿ ರಸ್ತೆ ಬಳಿ ಆ್ಯಂಬುಲೆನ್ಸ್ ತಡೆದ ಇನ್ಸ್ ಪೆಕ್ಟರ್ ಶಿವಕುಮಾರ್ ಪ್ರತಿಭಟನಾ ನಿರತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಾನಿರೋದೆ ಹೊಡಿಯೋದಕ್ಕೆ, ಪರಿಸ್ಥಿತಿ ನಿಯಂತ್ರಿಸೋದಕ್ಕೆ ಎಂದು ಆವಾಜ್ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಸ್ವಿಮ್ಮಿಂಗ್ ಪೂಲ್ ಬಳಿ ಬರದಂತೆ ಅಡ್ಡಹಾಕಿದ ಪೊಲೀಸರು ನ್ಯೂ ಸೆನ್ಸ್ ಕ್ರಿಯೆಟ್ ಮಾಡಬೇಡಿ ಎಂದು ಧಮ್ಕಿ ಹಾಕಿದ್ದಾರೆ. ಸದ್ಯ ಬಾಲಕರ ನಿವಾಸದ ಬಳಿ ಮೃತದೇಹ ಇರಿಸಲಾಗಿದೆ.
ಇದನ್ನು ಓದಿ :- ಈಶ್ವರಪ್ಪ ಬಾಯಿ ಬಿಟ್ಟರೆ ಸಾಕು ಮನುಷ್ಯನ ನೀಚ ಸಂಸ್ಕಾರ ಆಚೆಗೆ ಬರುತ್ತದೆ – ಕಾಂಗ್ರೆಸ್ ಟ್ವೀಟ್