ಧಾರವಾಡದ ಗರಗ ಪೊಲೀಸ್ ಠಾಣೆ ಹತ್ತಿರ ಸುರಂಗ ಮಾರ್ಗ ಪತ್ತೆ- ಏಕಾಏಕಿ ಕುಸಿದ ರಸ್ತೆ

ಧಾರವಾಡ (Dharwad) ತಾಲೂಕಿನ ಗರಗ ಗ್ರಾಮದ ಪೊಲೀಸ್ ಠಾಣೆ (Police station) ಹತ್ತಿರ ಏಕಾಏಕಿ ರಸ್ತೆ ಕುಸಿದು ಸುರಂಗ ಮಾರ್ಗ (Subway) ಪತ್ತೆಯಾಗಿದೆ. ಇಂದು ಈ ರಸ್ತೆ ಕುಸಿದಿದ್ದು, ದೊಡ್ಡ ಗುಂಡಿಯೇ ಬಿದ್ದಿದೆ. ತಳಭಾಗದಲ್ಲಿ ಸುರಂಗ ಮಾರ್ಗ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಧಾರವಾಡ (Dharwad) ತಾಲೂಕಿನ ಗರಗ ಗ್ರಾಮದ ಪೊಲೀಸ್ ಠಾಣೆ (Police station) ಹತ್ತಿರ ಏಕಾಏಕಿ ರಸ್ತೆ ಕುಸಿದು ಸುರಂಗ ಮಾರ್ಗ (Subway) ಪತ್ತೆಯಾಗಿದೆ. ಇಂದು ಈ ರಸ್ತೆ ಕುಸಿದಿದ್ದು, ದೊಡ್ಡ ಗುಂಡಿಯೇ ಬಿದ್ದಿದೆ. ತಳಭಾಗದಲ್ಲಿ ಸುರಂಗ ಮಾರ್ಗ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಆ ಮಾರ್ಗವನ್ನು ಪೊಲೀಸರು ಬಂದ್ ಮಾಡಿದ್ದು, ವಾಹನ ಸಂಚಾರಕ್ಕೆ ಬೇರೆ ಮಾರ್ಗ ಕಲ್ಪಿಸಿಕೊಟ್ಟಿದ್ದಾರೆ.

ಈ ಹಿಂದೆ ಕೂಡ ಗರಗ ಗ್ರಾಮದಲ್ಲೇ ರಸ್ತೆ ಕುಸಿದು ಸುರಂಗ ಮಾರ್ಗ ಪತ್ತೆಯಾಗಿತ್ತು. ಅದಾದ ಬಳಿಕ ಇದೀಗ ಮತ್ತೊಮ್ಮೆ ಗರಗ ಪೊಲೀಸ್ ಠಾಣೆ ಹತ್ತಿರವೇ ರಸ್ತೆ ಕುಸಿದು ಸುರಂಗ ಮಾರ್ಗ ಪತ್ತೆಯಾಗಿರುವುದು ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದೆ. ಸ್ಥಳಕ್ಕೆ ಗರಗ ಠಾಣೆ ಪಿಎಸ್ಐ ಮಲ್ಲನಗೌಡ ಸತ್ತಿಗೌಡರ ಭೇಟಿ ನೀಡಿ ಆ ಮಾರ್ಗವನ್ನು ಬಂದ್ ಮಾಡಿಸಿದ್ದಾರೆ.

ಇದನ್ನೂ ಓದಿ : – ಜೆಡಿಎಸ್ ಸುನಾಮಿ ಅಲೆಯಲ್ಲಿ ಎಲ್ಲಾ ಪಕ್ಷಗಳು ಕೊಚ್ಚಿ ಹೋಗುತ್ತವೆ – ಮಾಜಿ ಸಿಎಂ ಕುಮಾರಸ್ವಾಮಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!