FoodHealthHomeLife Style

ಸಿಕ್ಕಾಪಟ್ಟೆ ಟೀ, ಕುಡಿಯೋ ಅಭ್ಯಾಸ ನಿಮಗಿದ್ಯಾ.?

ಹೆಲ್ತ್‌ ಟಿಪ್ಸ್‌ : ಇಡೀ ದಿನ ಫ್ರೆಶ್ ಆಗಿರೋಕೆ ಜನರು ಬೆಳಿಗ್ಗೆಯಿಂದ ಸಂಜೆಯವರೆಗೆ ಟೀ ಸೇವನೆ ಮಾಡ್ತಾರೆ. ಬರೀ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಟೀ ಪ್ರಸಿದ್ಧಿ ಪಡೆದಿದೆ. ಕೋಟ್ಯಾಂತರ ಜನರು ಪ್ರತಿ ದಿನ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ.

ನೀರಿನ ನಂತರ ಅತಿ ಹೆಚ್ಚು ಸೇವನೆ ಮಾಡುವ ಪಾನೀಯಗಳಲ್ಲಿ ಟೀ ಒಂದು ಅಂದ್ರೆ ನೀವು ನಂಬ್ಲೇಬೇಕು. ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಟೀ ಕುಡಿಯಲು ಆಸಕ್ತಿ ತೋರ್ತಾರೆ. ಪ್ರತಿ ದಿನ ಟೀ ಸೇವನೆ ಮಾಡೋರು ನೀವಾಗಿದ್ದು, ಟೀ ನಿಮ್ಮ ಆರೋಗ್ಯ ಹಾಳು ಮಾಡುತ್ತಾ ಎಂಬ ಅನುಮಾನ ನಿಮಗೆ ಬಂದಿದ್ರೆ ನಿಜವಾಗ್ಲೂ ಇದು ನಿಮಗೆ ಅಚ್ಚರಿಯುಂಟು ಮಾಡುತ್ತದೆ.

ಮಿಲ್ಕ್ ಟೀ ಕುಡಿಯೋದು ಎಷ್ಟು ಒಳ್ಳೆಯದು..? ಹಾಲಿನ ಟೀ ಮೂಡ್ ಫ್ರೆಶ್ ಮಾಡುತ್ತೆ, ಕೆಲಸ ಮಾಡಲು ಶಕ್ತಿ ನೀಡುತ್ತೆ ಎಂದು ಜನರು ಹೇಳ್ತಾರೆ. ಒಂದು ದಿನ ಟೀ ಕುಡಿದಿಲ್ಲ ಅಂದ್ರೆ ತಲೆನೋವು ಬಂತು ಎನ್ನುವರಿದ್ದಾರೆ. ಟೀಯ ಈ ಎಲ್ಲ ಲಾಭದ ಹೊರತಾಗಿ ನಷ್ಟವೂ ಸಾಕಷ್ಟಿದೆ. ನೀವು ಪ್ರತಿ ದಿನ ಹಾಲು ಬೆರೆಸಿದ ಟೀ ಸೇವನೆ ಮಾಡಿದ್ರೆ ಮಾನಸಿಕ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿದೆ. ಹದಿಹರೆಯದವರಲ್ಲಿ ಸಾಮಾಜಿಕ ಸಂವಹನ ಇದ್ರಿಂದ ಕಡಿಮೆಯಾಗುತ್ತೆ ಎಂದು ಇತ್ತೀಚಿಗೆ ನಡೆದ ಅಧ್ಯಯನವೊಂದು ಬಹಿರಂಗಪಡಿಸಿದೆ.

ಟೀ ಕೂಡ ಮದ್ಯವೆಸನದಂತೆ. ಆರಂಭದಲ್ಲಿ ಚಿಕ್ಕದಾಗಿ ಶುರುವಾಗುವ ಹವ್ಯಾಸ ನಂತ್ರ ಚಟವಾಗುತ್ತದೆ. ಅದನ್ನು ಬಿಡೋದು ಸಾಧ್ಯವಾಗೋದಿಲ್ಲ. ಇದು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತೆ. ಚೀನಾದಲ್ಲಿ, ವಿಶೇಷವಾಗಿ ಯುವಜನರಲ್ಲಿ ಹಾಲಿನ ಚಹಾದ ಜನಪ್ರಿಯತೆಯಲ್ಲಿ ಮಹತ್ತರವಾದ ಹೆಚ್ಚಳ ಕಂಡುಬಂದಿದೆ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!