FoodHealthHomeLife Style

ಅಲರ್ಜಿಯಿಂದ ಬಳಲುತ್ತಿದ್ದೀರಾ..?

ಹೆಲ್ತ್‌ ಟಿಪ್ಸ್‌ : ಋತುಮಾನದಲ್ಲಿ ಬದಲಾವಣೆಗಳು ಮತ್ತು ಜಾಗತಿಕ ತಾಪಮಾನ ಏರಿಕೆಯು ಈ ಅಲರ್ಜಿಗೆ ಕಾರಣವಾಗುತ್ತವೆ. ಹವಾಮಾನದಲ್ಲಿಯ ತೀವ್ರ ಬದಲಾವಣೆಗಳು ನಮ್ಮಲ್ಲಿ ಶಾರೀರಿಕ ಬದಲಾವಣೆಗಳನ್ನು ಉಂಟುಮಾಡುತ್ತವೆ.

ಮೂಗು ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರುವ ಅಲರ್ಜಿಯನ್ನು ಸಾಮಾನ್ಯವಾಗಿ ಅಥವಾ ಅಲರ್ಜಿಕ್ ರಿನಿಟಿಸ್ ಎಂದು ಕರೆಯಲಾಗುತ್ತದೆ, ಇದು ದೀರ್ಘಕಾಲದ ಸಮಸ್ಯೆಯಾಗಿರಲಿದ್ದು, ದಿನಕ್ಕೆ 20 ಅಥವಾ 30 ಬಾರಿ ಸೀನುವಂತಹ ಪರಿಸ್ಥಿತಿ ಇರುತ್ತದೆ. ಈ ಅಲರ್ಜಿಯ ರೋಗಲಕ್ಷಣಗಳು ಸಾಮಾನ್ಯ ಶೀತದಂತೆಯೇ ಇರುತ್ತದೆ ಆದರೆ, ತೀವ್ರತರದ ಶೀತವಾಗಿರುವುದಿಲ್ಲ. hay fever ನಿಂದ ದೂರ ಉಳಿಯಬೇಕೆಂದರೆ ಹಣ್ಣು ಹಾಗೂ ಜ್ಯೂಸ್ ಗಳಿಂದ ಕೆಲ ದಿನಗಳ ಕಾಲ ದೂರವಿರಬೇಕಾಗುತ್ತದೆ. ಮತ್ತು ನಿಯಮಿತ ವ್ಯಾಯಾಮ ಮಾಡುವುದು ಅಗತ್ಯವಿರುತ್ತದೆ.

ಅಲರ್ಜಿಯಿಂದ ದೂರ ಉಳಿಯಲು ಆಯುರ್ವೇದದಲ್ಲಿ ಸರಳ ಚಿಕಿತ್ಸೆಗಳಿವೆ. ಪ್ರಾಚೀನವಾದ ವಿಧಾನವೆಂದರೆ ಜಲ ನೇತಿ ಅಥವಾ ಮೂಗಿನ ಡೌಚೆ (ಮೂಗು ತೊಳೆಯುವುದು). ಜಲ್ ನೇತಿ ಮೂಗಿನ ಮಾರ್ಗಗಳಿಂದ ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಸೋಂಕನ್ನು ತಡೆಯುತ್ತದೆ. ಉಸಿರಾಟದ ಮಾರ್ಗವನ್ನು ಸುಗಮಗೊಳಿಸುತ್ತದೆ. ರಕ್ತತ ಪರಿಚಲನೆಯನ್ನೂ ಸುಧಾರಿಸುತ್ತದೆ. ನಿದ್ರೆ ಕೂಡ ಉತ್ತಮವಾಗಿರುತ್ತದೆ.

ಈ ವಿಧಾನವನ್ನು ಅನುಸರಿಸಲು ನೀವು 10 ನಿಮಿಷಗಳನ್ನು ವ್ಯಯಿಸಬೇಕಾಗುತ್ತದೆ. ಇದನ್ನು ಅನುಸರಿಸಿದ್ದೇ ಆದರೆ, ಜಲ್ ನೇತಿ ಮಾಡಲು ನಿಮ್ಮ ದಿನದಲ್ಲಿ ಹತ್ತು ನಿಮಿಷಗಳನ್ನು ತೆಗೆದುಕೊಳ್ಳಿ ಮತ್ತು ನೀವು ಜೀವನದುದ್ದಕ್ಕೂ ಸೈನಸೈಟಿಸ್, hay fever ನಿಂದ ಮುಕ್ತರಾಗಬಹುದು. ಈ ವಿಧಾನವು ಮೈಗ್ರೇನ್ ಮತ್ತು ಅಸ್ತಮಾ ರೋಗಲಕ್ಷಣಗಳನ್ನೂ ಕೂಡ ದೂರ ಇಡುತ್ತದೆ

ಫುಡ್ ಅಲರ್ಜಿಯಿಂದ ಬಳಲುತ್ತಿರುವರು ವಿಟಮಿನ್ ಸಿ ಮತ್ತು ಇ ಯುಕ್ತ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ ಮತ್ತು ಇ ಫುಡ್ ಅಲರ್ಜಿಗಳನ್ನು ದೂರ ಇಡುತ್ತದೆ. ಬೆಳಿಗ್ಗೆ ಖಾಲೆ ಹೊಟ್ಟೆಯಲ್ಲಿ ನೀರಿನಲ್ಲಿ 5 ಹನಿ ಕ್ಯಾಸ್ಟರ್ ಆಯಿಲ್ ಸೇರಿಸಿ ಕುಡಿಯುವುದರಿಂದ ಚರ್ಮ ಮತ್ತು ಮೂಗಿನ ಮಾರ್ಗಗಳಲ್ಲಿನ ಅರ್ಜಿಯನ್ನು ಇದು ತಡೆಯುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ದೇಹದಲ್ಲಿನ ಅಲರ್ಜಿಗಳಿಗೆ ಒತ್ತಡ ಕೂಡ ಪ್ರಮುಖ ನಿರ್ವಹಿಸುತ್ತದೆ. ಮನಸ್ಸು ಸಮಾಧಾನವಿಲ್ಲವೆಂದಾಗ ಹಲವಾರು ಆಲೋಚಗಳು ಕಾಡಲು ಶುರುವಾಗುತ್ತದೆ. ಇದರಿಂದ ಮನುಷ್ಯ ಒತ್ತಡಕ್ಕೊಳಗಾಗುತ್ತಾನೆ. ಇದು ಅಲರ್ಜಿಗೆ ಆಹ್ವಾನ ನೀಡಿದಂತಾಗುತ್ತದೆ. ಹೀಗಾಗಿ ವಿಶ್ರಾಂತಿ ಪಡೆದು ಒತ್ತಡಗಳಿಂದ ದೂರವಿರಿ. ಇದರಿಂದ ಜೀವನದ ಗುಣಮಟ್ಟ ಸುಧಾರಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!