Food

ಕಡಿಮೆ ಸಮಯದಲ್ಲಿ ಅವಲಕ್ಕಿ ಲಾಡು

ತಕ್ಷಣಕ್ಕೆ ಏನಾದರೂ ಸಿಹಿ ತಿಂಡಿಯನ್ನು ಮಾಡಬೇಕಾಗಿ ಬರುವ ಸಂದರ್ಭ ಇರುತ್ತದೆ. ಆ ಸಂದರ್ಭದಲ್ಲಿ ಸಿಂಪಲ್ ಆದ ರೆಸಿಪಿಯಲ್ಲಿ ಅವಲಕ್ಕಿಯ ಲಾಡು ಮಾಡಿ ನೋಡಿ. ಹಬ್ಬದ ಸಂದರ್ಭಗಳಲ್ಲಿ ಇಲ್ಲವೇ ವಿಶೇಷ ದಿನಗಳಲ್ಲಿ ಇದನ್ನು ಮಾಡಿ ಎಲ್ಲರಿಗೂ ಹಂಚಬಹುದು. ಸುಲಭವಾಗಿ ಮಾಡಬಹುದಾದ ಅವಲಕ್ಕಿ ಲಾಡು ಹೇಗೆಂದು ಇಲ್ಲಿ ತಿಳಿಯೋಣ…

ಬೇಕಾಗುವ ಪದಾರ್ಥಗಳು :

ಅವಲಕ್ಕಿ – 1 ಕಪ್
ಸಕ್ಕರೆ – ಅರ್ಧ ಕಪ್
ತುಪ್ಪ – ಕಾಲು ಕಪ್
ಒಣ ತೆಂಗಿನ ತುರಿ – ಅರ್ಧ ಕಪ್
ಗೋಡಂಬಿ ಹಾಗೂ ಒಣ ದ್ರಾಕ್ಷಿ – ಕಾಲು ಕಪ್
ಏಲಕ್ಕಿ ಪುಡಿ – 1 ಟೀಸ್ಪೂನ್

ಮಾಡುವ ವಿಧಾನ :

  • ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಳ್ಳಿ, ಅದರಲ್ಲಿ ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ಹುರಿದುಕೊಳ್ಳಿ. ಗೋಡಂಬಿ, ದ್ರಾಕ್ಷಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ಪಕ್ಕಕ್ಕಿರಿಸಿ.
  • ಈಗ ಮಧ್ಯಮ ಉರಿಯಲ್ಲಿ ಒಣ ಕೊಬ್ಬರಿ ಹಾಗೂ ಅವಲಕ್ಕಿಯನ್ನು ಗರಿಗರಿಯಾಗಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ.
  • ಮಿಕ್ಸರ್ ಜಾರ್ಗೆ ಸಕ್ಕರೆ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಹುರಿದ ಅವಲಕ್ಕಿ ಹಾಗೂ ಒಣ ತೆಂಗಿನಕಾಯಿ ಮಿಶ್ರಣ ಸೇರಿಸಿ ಮತ್ತೆ ಪುಡಿ ಮಾಡಿಕೊಳ್ಳಿ.
  • ಒಂದು ಕಡಾಯಿಯಲ್ಲಿ ಉಳಿದ ತುಪ್ಪ ಬಿಸಿ ಮಾಡಿ, ಪುಡಿ ಮಾಡಿದ ಮಿಶ್ರಣವನ್ನು ಹಾಕಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿಯನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿಕೊಳ್ಳಿ. ಚೆನ್ನಾಗಿ ಮಿಶ್ರಣವಾದ ಬಳಿಕ ಉರಿಯನ್ನು ಆಫ್ ಮಾಡಿ.
  • ಮಿಶ್ರಣ ಸ್ವಲ್ಪ ಬೆಚ್ಚಗಿರುವಾಗಲೇ ಕೈಯಲ್ಲಿ ತೆಗೆದುಕೊಂಡು ನಿಂಬೆ ಗಾತ್ರದ ಆಕಾರದ ಉಂಡೆಗಳನ್ನು ಮಾಡಿಕೊಳ್ಳಿ.
  • ಮಿಶ್ರಣ ಗಟ್ಟಿ ಎನಿಸಿದರೆ ಸ್ವಲ್ಪ ಹಾಲನ್ನು ಹಾಕಿ ಮಿಕ್ಸ್ ಮಾಡಿ ಉಂಡೆಗಳನ್ನು ಕಟ್ಟಿಕೊಳ್ಳಬಹುದು.
  • ಅವಲಕ್ಕಿ ಲಾಡು ತಯಾರಾಗಿದ್ದು, ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟರೆ ಕೆಡದಂತೆ ಇರಿಸಬಹುದು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!