ಭಿನ್ನ ವಿಭಿನ್ನ ರೀತಿಯಲ್ಲಿ ಬಳಸಿ ಅಡುಗೆ ಮಾಡುವುದರಿಂದಲೇ ಹೊಸ ಹೊಸ ರುಚಿಗಳ ಅನುಭವವೂ ನಮಗಾಗುತ್ತದೆ. ನಾವಿಂದು ಒಂದು ಡಿಫರೆಂಟ್ ಸ್ಟೈಲ್ನಲ್ಲಿ ಚಿಕನ್ ಗ್ರೇವಿ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಗೋಡಂಬಿ ಸೇರಿಸಿ ರುಚಿಯಾದ ಚಿಕನ್ ಗ್ರೇವಿ ನೀವು ಕೂಡಾ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು :
- ಚಿಕನ್ – ಅರ್ಧ ಕೆಜಿ
- ಕೆಂಪು ಮೆಣಸಿನಕಾಯಿ – 8
- ಈರುಳ್ಳಿ – 2
- ಟೊಮೆಟೊ – 2
- ಗೋಡಂಬಿ – 10
- ಗೋಡಂಬಿ ಪೇಸ್ಟ್ – 2 ಟೀಸ್ಪೂನ್
- ಅರಿಶಿನ – ಅರ್ಧ ಟೀಸ್ಪೂನ್
- ಅಡುಗೆ ಎಣ್ಣೆ – ಅರ್ಧ ಕಪ್
- ಉಪ್ಪು – ರುಚಿಗೆ ತಕ್ಕಷ್ಟು
- ದನಿಯಾ ಪುಡಿ – 1 ಟೀಸ್ಪೂನ್
- ಗರಂ ಮಸಾಲ – 1 ಟೀಸ್ಪೂನ್
- ಕಸೂರಿ ಮೇಥಿ – ಅರ್ಧ ಟೀಸ್ಪೂನ್
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮಾಡುವ ವಿಧಾನ :
- ಮೊದಲಿಗೆ ಮಸಾಲೆ ಮಾಡಲು ನೆನೆಸಿದ ಒಣಮೆಣಸಿನಕಾಯಿ ಟೊಮೆಟೋ ಮತ್ತು ಗೋಡಂಬಿ ಪೇಸ್ಟ್ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ಒಂದು ಬಾಣಲೆಯನ್ನು ಬಿಸಿಗೆ ಇಟ್ಟು ಅಡುಗೆ ಎಣ್ಣೆ ಹಾಕಿ ಈರುಳ್ಳಿ, ಗೋಡಂಬಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಬೇಯಿಸಿದ ನಂತರ ತೊಳೆದಿಟ್ಟ ಚಿಕನ್ ಸೇರಿಸಿ ಅದಕ್ಕೆ ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ, ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ.
- ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿಕೊಳ್ಳಿ. ಕೊನೆಯಲ್ಲಿ ಗರಂ ಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಸೇರಿಸಿ ಕುದಿಸಿಕೊಂಡರೆ ರೆಸ್ಟೋರೆಂಟ್ ಸ್ಟೈಲ್ ಚಿಕನ್ ಸಿದ್ಧ.