Food

ಗರಿಗರಿಯಾದ ಈರುಳ್ಳಿ ಕಟ್ಲೆಟ್

ಸಂಜೆ ಟೀ ಜೊತೆಗೆ ಏನಾದರು ತಿನ್ನಬೇಕು ಎಂದೆನಿಸುವುದು ಸಹಜ. ಅದಕ್ಕಾಗಿಯೇ ಒಂದು ಸುಲಭವಾದ ಸ್ನಾಕ್ಸ್ ರೆಸಿಪಿಯನ್ನು ನಿಮಗೆ ಹೇಳಿಕೊಡುತ್ತಿದ್ದೇವೆ. ಇದರ ಹೆಸರು ಈರುಳ್ಳಿ ಕಟ್ಲೆಟ್, ಹಾಗಿದ್ರೆ ಬನ್ನಿ 5 ನಿಮಿಷದಲ್ಲಿ ಗರಿಗರಿಯಾದ ಈರುಳ್ಳಿ ಕಟ್ಲೆಟ್ ಮಾಡುವುದು ಹೇಗೆಂದು ನೋಡೋಣ.

ಬೇಕಾಗುವ ಸಾಮಗ್ರಿಗಳು :

ಉದ್ದಕ್ಕೆ ಹೆಚ್ಚಿದ ಈರುಳ್ಳಿ – 4
ಸಣ್ಣದಾಗಿ ಹೆಚ್ಚಿದ ಶುಂಠಿ – 1 ಇಂಚು
ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಮೆಣಸಿನ ಪುಡಿ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಒಂದು ಚಮಚ ಮಿಶ್ರಣಕ್ಕೆ ಹಾಗೂ ಕರಿಯಲು ಬೇಕಾದಷ್ಟು
ಅಕ್ಕಿ ಹಿಟ್ಟು – ಮುಕ್ಕಾಲು ಕಪ್

ಮಾಡುವ ವಿಧಾನ :

  • ಮೊದಲಿಗೆ ಹೆಚ್ಚಿದ ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಜೀರಿಗೆಯನ್ನು ಒಂದು ಬೌಲಿನಲ್ಲಿ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ.
  • ಮುಕ್ಕಾಲು ಕಪ್ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಒಂದರಿಂದ ಎರಡು ಚಮಚ ಆಗುವಷ್ಟು ನೀರನ್ನು ಹಾಕಿಕೊಂಡು ಮತ್ತೊಮ್ಮೆ ಕಲಸಿ. ಹಿಟ್ಟಿನ ಜೊತೆಗೆ ಈರುಳ್ಳಿ ಚೆನ್ನಾಗಿ ಅಂಟಿಕೊಳ್ಳಬೇಕು. ಇಲ್ಲದಿದ್ದರೆ ಎಣ್ಣೆಯಲ್ಲಿ ಬಿಡುವಾಗ ಹಿಟ್ಟಿನಿಂದ ಬೇರೆಯಾಗುತ್ತದೆ.
  • ನಂತರ ಕಲಸಿದ ಹಿಟ್ಟನ್ನು ಸ್ವಲ್ಪ ಸ್ಪಲ್ಪವಾಗಿ ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಅದನ್ನು ಅಂಗೈಯಲ್ಲಿಟ್ಟು ದಪ್ಪವಾಗಿ ತಟ್ಟಿಕೊಳ್ಳಿ.
  • ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಯಾಗಲು ಇಡಿ. ಎಣ್ಣೆ ಚೆನ್ನಾಗಿ ಕಾದ ಮೇಲೆ ತಟ್ಟಿದ ಮಿಶ್ರಣವನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಡಿ.
  • ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮನಲ್ಲೇ ಇಟ್ಟುಕೊಂಡು ಇದನ್ನು ಕರಿಯಬೇಕು. ಎರಡೂ ಕಡೆ ಚೆನ್ನಾಗಿ ಬೇಯುವತನಕ ಮಗುಚಿ ಹಾಕುತ್ತಿರಿ. ಕಂದು ಬಣ್ಣ ಬರುವವರೆಗೆ ಇದನ್ನು ಫ್ರೈ ಮಾಡಿಕೊಂಡರೆ ಸಾಕು.
  • ನಂತರ ಇದನ್ನು ಎಣ್ಣೆಯಿಂದ ತೆಗೆದು ಒಂದು ಪ್ಲೇಟ್ನಲ್ಲಿ ಹಾಕಿಕೊಳ್ಳಿ.
  • ಬಿಸಿಬಿಸಿ ಹಾಗೂ ಗರಿಗರಿಯಾದ ಈರುಳ್ಳಿ ಪಕೋಡ ತಿನ್ನಲು ರೆಡಿ. ಇದನ್ನು ಟೊಮೆಟೊ ಸಾಸ್ ಅಥವ ಚಟ್ನಿಯೊಂದಿಗೆ ಸವಿಯಬಹುದು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!