ನಾನ್ ವೆಜ್ ಪ್ರೀಯರಿಗೆ ಏನಾದರೂ ಸಂಜೆ ವೇಳೆಯಲ್ಲಿ ರುಚಿರುಚಿಯಾದ ತಿನಿಸು ತಿನ್ನಬೇಕೆಂದು ಹಂಬಲಿಸುತ್ತಾರೆ. ಅಂತಹವರಿಗಾಗಿ ಒಂದು ನಾನ್’ವೆಜ್ ರೆಸಿಪಿ ಹೇಳಿಕೊಡುತ್ತೇವೆ. ರುಚಿಕರವಾದ ಚಿಕನ್ ಬಾಲ್ಸ್ ಒಮ್ಮೆ ಟ್ರೈ ಮಾಡಿ ನೋಡಿ ಚಹಾದ ಸಮಯದಲ್ಲಿ ಸವಿಯಿರಿ.
ಬೇಕಾಗುವ ಪದಾರ್ಥಗಳು :
ಮೂಳೆಗಳಿಲ್ಲದೆ ಬೇಯಿಸಿದ ಚಿಕನ್ – ಅರ್ಧ ಕೆಜಿ
ಬೇಯಿಸಿದ ಆಲೂಗಡ್ಡೆ – 1
ಮೊಟ್ಟೆ – 1
ಮೈದಾ ಹಿಟ್ಟು – 2 ಟೀಸ್ಪೂನ್
ಕಾರ್ನ್ ಫ್ಲೋರ್ – 1 ಟೀಸ್ಪೂನ್
ಬ್ರೆಡ್ ಕ್ರಂಬ್ಸ್ – 1 ಕಪ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಕರಿ ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಎಣ್ಣೆ – ಡೀಪ್ ಫ್ರೈಗೆ
ಮಾಡುವ ವಿಧಾನ :
- ಮೊದಲಿಗೆ ಬೇಯಿಸಿದ ಚಿಕನ್ ಅನ್ನು ಸಣ್ಣದಾಗಿ ಹೆಚ್ಚಿ, ಒಂದು ಪಾತ್ರೆಗೆ ಹಾಕಿಕೊಳ್ಳಿ
- ಅದಕ್ಕೆ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಗರಂ ಮಸಾಲಾ, ಕರಿ ಮೆಣಸಿನ ಪುಡಿ, ಉಪ್ಪು, ನಿಂಬೆ ರಸ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಹಾಗೂ ಬೇಯಿಸಿದ ಆಲೂಗಡ್ಡೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ
- ಈಗ ಒಂದು ಬೌಲ್ನಲ್ಲಿ ಬ್ರೆಡ್ ಕ್ರಂಬ್ಸ್, ಕಾರ್ನ್ ಫ್ಲೋರ್, ಮೈದಾ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ
- ಇನ್ನೊಂದು ಬೌಲ್ನಲ್ಲಿ ಮೊಟ್ಟೆಯನ್ನು ಒಡೆದು ಬೀಟ್ ಮಾಡಿಕೊಳ್ಳಿ.
- ಚಿಕನ್ ಮಿಶ್ರಣವನ್ನು ತೆಗೆದುಕೊಂಡು, ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಆ ಚಿಕನ್ ಉಂಡೆಗಳನ್ನು ಒಂದೊಂದಾಗಿಯೇ ಬೀಟ್ ಮಾಡಿದ ಮೊಟ್ಟೆಯಲ್ಲಿ ಅದ್ದಿದ ಬಳಿಕ ಬ್ರೆಡ್ ಕ್ರಂಬ್ಸ್ ಮಿಶ್ರಣದಲ್ಲಿ ರೋಲ್ ಮಾಡಿಕೊಳ್ಳಿ
- ನಂತರ ಬಿಸಿ ಎಣ್ಣೆಯಲ್ಲಿ ಚಿಕನ್ ಉಂಡೆಗಳನ್ನು ಒಂದೊಂದಾಗಿಯೇ ಬಿಟ್ಟು, ಡೀಪ್ ಫ್ರೈ ಮಾಡಿ.
- ಉಂಡೆಗಳು ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.
- ನಂತರ ರುಚಿಕರ ಚಿಕನ್ ಬಾಲ್ಸ್ ತಯಾರಾಗಿದ್ದು, ಟೊಮೆಟೊ ಕೆಚಪ್ ಜೊತೆ ಸವಿಯಿರಿ.