ಸಂಜೆ ಸಮಯದಲ್ಲಿ ಹಸಿವನ್ನು ತಣಿಸಲು ಏನಾದರೂ ಆರೋಗ್ಯಕರ ಸ್ನ್ಯಾಕ್ಸ್ ಅನ್ನು ನಾವು ಹುಡುಕುತ್ತೇವೆ. ನಾವಿಂದು ಅದಕ್ಕೆ ಪರ್ಫೆಕ್ಟ್ ಎನಿಸುವ ಒಂದು ರೆಸಿಪಿ ಹೇಳಿಕೊಡುತ್ತೇವೆ. ಧಾನ್ಯಗಳ ರುಚಿಕರ ನಿಪ್ಪಟ್ಟು ಮಾಡುವ ವಿಧಾನವನ್ನು ಇಲ್ಲಿ ಕಲಿತುಕೊಳ್ಳಿ.
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – ಮುಕ್ಕಾಲು ಕಪ್
ಜೋಳದ ಹಿಟ್ಟು – ಅರ್ಧ ಕಪ್
ರಾಗಿ ಹಿಟ್ಟು – ಕಾಲು ಕಪ್
ಎಣ್ಣೆ – 5 ಟೀಸ್ಪೂನ್
ಬಿಳಿ ಎಳ್ಳು – 2 ಟೀಸ್ಪೂನ್
ಅಗಸೆ ಬೀಜ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 3
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ನೀರು – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
- ಮೊದಲಿಗೆ ಬಿಳಿ ಎಳ್ಳನ್ನು ಪ್ಯಾನೆಗೆ ಹಾಕಿ ಅದು ಸಿಡಿಯುವವರೆಗೆ ಹುರಿದುಕೊಳ್ಳಿ.
- ಬಳಿಕ ಅಗಸೆ ಬೀಜವನ್ನು ಹುರಿಯಿರಿ. ಅಗಸೆ ಬೀಜ ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್ಗೆ ಹಾಕಿ ಪುಡಿ ಮಾಡಿ.
- ನಂತರ ಒಂದು ಪಾತ್ರೆಗೆ ಅಗಸೆ ಬೀಜದ ಪುಡಿ, ಹುರಿದ ಎಳ್ಳು, ಗೋಧಿ ಹಿಟ್ಟು, ಜೋಳದ ಹಿಟ್ಟು ಹಾಗೂ ರಾಗಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
- ಅದಕ್ಕೆ ಉಪ್ಪು, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವಿನ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
- ಈಗ 5 ಟೀಸ್ಪೂನ್ ಎಣ್ಣೆ ಸೇರಿಸಿ, ಬಳಿಕ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಹಿಟ್ಟಿನಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಮಿಶ್ರಣ ಮಾಡಿ ನಂತರ ಹಿಟ್ಟಿ ಅನ್ನು ಅರ್ಧ ಗಂಟೆ ನೆನೆಯಲು ಬೀಡಿ.
- ಒವನ್ ಅನ್ನು 8-10 ನಿಮಿಷ 180 ಡಿಗ್ರಿ ಉಷ್ಣತೆಯಲ್ಲಿ ಪೂರ್ವಭಾವಿಯಾಗಿ ಕಾಯಿಸಿಟ್ಟುಕೊಳ್ಳಿ.
- ಹಿಟ್ಟನ್ನು 2 ಭಾಗ ಮಾಡಿ, ಸುತ್ತಿಕೊಂಡು, ಲಟ್ಟಣಿಗೆ ಸಹಾಯದಿಂದ ನಿಪ್ಪಟ್ಟು ಆಕಾರಕ್ಕೆ ಲಟ್ಟಿಸಿಕೊಳ್ಳಿ.
- ಬಳಿಕ ನಿಧಾನವಾಗಿ ನಿಪ್ಪಟ್ಟುಗಳನ್ನು ತೆಗೆದು, ಬಟರ್ ಪೇಪರ್ ಹರಡಿರುವ ಟ್ರೇಯಲ್ಲಿ ಜೋಡಿಸಿ.
- ಈಗ ಟ್ರೇಯನ್ನು ಒವನ್ನಲ್ಲಿಟ್ಟು, 160 ಡಿಗ್ರಿ ಬಿಸಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಿ.
- ನಿಪ್ಪಟ್ಟಿನ ಅಂಚು ಕೆಂಪಗಾಗುತ್ತಿದ್ದಂತೆ ಅವುಗಳನ್ನು ಒವನ್ನಿಂದ ತೆಗೆದು ಆರಲು ಬಿಡಿ.
- ಗರಿಗರಿಯಾದ ಆರೋಗ್ಯಕರ ಧಾನ್ಯಗಳ ರುಚಿಕರ ನಿಪ್ಪಟ್ಟು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ.