FoodHealthHomeLife Style

ರುಚಿಯಾದ ಈ ಮೂಲಂಗಿ ಪರೋಟ ಒಮ್ಮೆ ಟ್ರೈ ಮಾಡಿ..!

ನಾವು ಇಂದು ಪರೋಟ ಪ್ರಿಯರಿಗಾಗಿ ಮೂಲಂಗಿ ಪರೋಟವನ್ನು ಮಾಡುವ ವಿಧಾನವನ್ನು ನಾವು ಹೇಳಲಿದ್ದೇವೆ.

ಮೂಲಂಗಿಯೊಂದಿಗೆ ಮಿಶ್ರ ಮಾಡುವ ಮಸಾಲೆ ಪದಾರ್ಥಗಳು ಈ ಪರೋಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸತ್ವಪೂರ್ಣ ತಿಂಡಿಯನ್ನು ನಿಮಗೆ ಒದಗಿಸುತ್ತದೆ. ಹಾಗಿದ್ದರೆ ಅತಿ ಸುಲಭವಾಗಿ ತಯಾರಿಸಬಹುದಾದ ಈ ಪರೋಟ ರೆಸಿಪಿಯ ತಯಾರಿ ವಿಧಾನವನ್ನು ಕೆಳಗೆ ನಾವು ನೀಡಿದ್ದೇವೆ. ಇಂದೆ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು :

  • ಮೂಲಂಗಿ – 2 ಕಪ್
  • ಈರುಳ್ಳಿ – 1
  • ಬೆಳ್ಳುಳ್ಳಿ ಪೇಸ್ಟ್ – 3 ಚಮಚ
  • ಜೀರಿಗೆ ಪುಡಿ – 1 ಚಮಚ
  • ಗರಮ್ ಮಸಾಲಾ -1 ಚಮಚ
  • ಕಾಳುಮೆಣಸು ಪುಡಿ- 1 ಚಮಚ
  • ದನಿಯಾ ಪುಡಿ – 3 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು
  • ಗೋಧಿ ಹಿಟ್ಟು- 1 ಕಪ್
  • ಅಡುಗೆ ಎಣ್ಣೆ ಅಥವಾ ತುಪ್ಪ – ಸ್ವಲ್ಪ

ಮಾಡುವ ವಿಧಾನ :

  • ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
  • ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದಿನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ ಬೇಯಿಸಿಕೊಳ್ಳಿ.
  • ಗೋಧಿ ಹಿಟ್ಟನ್ನು ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ. ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ.
  • ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ.
  • ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿಕೊಳ್ಳಿ.
  • ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ. 10. ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!