ಕೆಲವರಿಗೆ ಅಂತು ಕೇಕ್ಸ್ ಅಂದರೆ ತುಂಬಾನೇ ಇಷ್ಟ, ಅವರಿಗೆ ಏನಾದರೂ ಸ್ಪೆಷಲ್ ರೆಸಿಪಿ ಮಾಡಬೇಕಲ್ವಾ? ಅದಕ್ಕೆ ಒಂದು ಸ್ಪೆಷಲ್ ರೆಸಿಪಿ ಹೇಳಿಕೊಡುತ್ತೇವೆ. ಅದು ಎಗ್ಲೆಸ್ ಬ್ರೌನ್ಸಿ ಕಪ್ಕೇಕ್ (Eggless Brownies Cup cake) ನೀವೂ ಸುಲಭವಾಗಿ ಮಾಡಿಬಹುದು.
ಬೇಕಾಗುವ ಪದಾರ್ಥಗಳು:
ಕೋಕೋ ಪೌಡರ್ – ಅರ್ಧ ಕಪ್
ಬಿಸಿ ನೀರು – ಮುಕ್ಕಾಲು ಕಪ್
ಬ್ರೌನ್ ಶುಗರ್ – 1 ಕಪ್
ಮಾಗಿದ ಬಾಳೆಹಣ್ಣು – 1
ತೆಂಗಿನ ಎಣ್ಣೆ – ಅರ್ಧ ಕಪ್
ವೆನಿಲ್ಲಾ ಸಾರ – 1 ಟೀಸ್ಪೂನ್
ಮೈದಾ ಹಿಟ್ಟು – ಒಂದೂವರೆ ಕಪ್
ಅಡುಗೆ ಸೋಡಾ – ಅರ್ಧ ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಮಾಡುವ ವಿಧಾನ:
- ಮೊದಲಿಗೆ ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್ನಲ್ಲಿ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
- ಒಂದು ಬಟ್ಟಲಿಗೆ ಕೋಕೋ ಪೌಡರ್ ಮತ್ತು ಬೆಚ್ಚಗಿನ ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ.
- ನಂತರ ಅದಕ್ಕೆ ಸಕ್ಕರೆ ಸೇರಿಸಿ, ಅದು ಕರಗುವವರೆಗೆ ಕಲಕಿ.
- ಒಂದು ಫೋರ್ಕ್ನ ಸಹಾಯದಿಂದ ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಅದನ್ನು ಕೋಕೋ ಪೌಡರ್ ಹಾಗೂ ಸಕ್ಕರೆಯ ಮಿಶ್ರಣಕ್ಕೆ ಸೇರಿಸಿಬೇಕು.
- ಅದಕ್ಕೆ ತೆಂಗಿನ ಎಣ್ಣೆ ಹಾಗೂ ವೆನಿಲ್ಲಾ ಸಾರವನ್ನು ಸೇರಿಸಿ, ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿಕೊಳ್ಳಿ.
- ಈಗ ಮೈದಾ ಹಿಟ್ಟು, ಅಡುಗೆ ಸೋಡಾ ಹಾಗೂ ಉಪ್ಪು ಸೇರಿಸಿ, ಎಲ್ಲವನ್ನೂ ಸ್ವಲ್ಪ ಮಿಶ್ರಣ ಮಾಡಿಕೊಳ್ಳಿ.
- ಈಗ ಕೇಕ್ ತಯಾರಿಸುವ ಲೈನರ್ ಅಥವಾ ಮೌಲ್ಡ್ಗಳನ್ನು ತೆಗೆದುಕೊಂಡು, ಅದರಲ್ಲಿ ಹಿಟ್ಟನ್ನು ಹಾಕಿ.
- ಬೇಕಿಂಗ್ ಪಾತ್ರೆಯಲ್ಲಿ ಅವುಗಳನ್ನು ಇಟ್ಟು, ಓವನ್ನಲ್ಲಿ ಇರಿಸಿ. ಅದು 12-15 ನಿಮಿಷಗಳ ನಂತರ ಕಪ್ಕೇಕ್ಗಳು ಬೆಂದಿದೆಯೇ ಎಂದು ಪರಿಶೀಲಿಸಿ.
- ಬಳಿಕ ಕೇಕ್ಗಳನ್ನು ಓವನ್ನಿಂದ ಹೊರ ತೆಗೆದು, 10 ನಿಮಿಷ ತಣ್ಣಗಾಗಲು ಬಿಡಿ.
ನಂತರ ಎಗ್ಲೆಸ್ ಬ್ರೌನಿ ಕಪ್ಕೇಕ್ ತಯಾರಾಗಿದ್ದು, ಮನೆಯವರಿಗೆ ಕೊಟ್ಟು ಆನಂದದಿಂದ ಸವಿಯಿರಿ.