Food

ಗರಿಯಾದ ಚಿಕನ್ ಸಮೋಸ

ಆಲೂ, ವೆಜ್ಟೇಬಲ್, ಅಣಬೆ ಮತ್ತು ಪನೀರ್ ಸಮೋಸಗಳು ಎಲ್ಲರಿಗೂ ಇಷ್ಟ ಹಾಗೂ ಈ ಸಮೋಸಗಳು ಹೋಟೆಲ್, ಬೀದಿ-ಬದಿಗಳಲ್ಲೂ, ಚಾಟ್‍ಸ್ಟ್ರೀಟ್‍ಗಳಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ನಾವೇ ಮನೆಯಲ್ಲಿಯೇ ಸುಲಭವಾಗಿ ಗರಿಯಾದ ಚಿಕನ್ ಸಮೋಸ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ…

ಬೇಕಾಗುವ ಪದಾರ್ಥಗಳು:
ಬೋನ್ಲೆಸ್ ಚಿಕನ್ – 1 ಕಪ್
ಮೆಣಸಿನ ಪುಡಿ – 1 1/2 ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಸೋಂಪಿನ ಪುಡಿ – 1 ಟೀಸ್ಪೂನ್
ಕಾಳುಮೆಣಸು – ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಹುರಿಯಲು ಬೇಕಾಗುವಷ್ಟು
ಸಣ್ಣಗೆ ಹೆಚ್ಚಿದ ಈರುಳ್ಳಿ – 3
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಶುಂಠಿ ಪೇಸ್ಟ್ – 1 1/2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಾಯಿ – 3
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್
ಮೊಟ್ಟೆ – 1
ಮೈದಾ – 2 ಕಪ್
ನೀರು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

  • ಮೊದಲಿಗೆ ಪ್ಯಾನ್ನಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
  • ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿ.
  • ಬಳಿಕ ಸಣ್ಣಗೆ ಕೊಚ್ಚಿದ ಚಿಕನ್, ಸೋಂಪಿನ ಪುಡಿ, ಕಾಳುಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಚಿಕನ್ ಚೆನ್ನಾಗಿ ಬೆಂದ ಬಳಿಕ ಪ್ಯಾನ್ ಅನ್ನು ಪಕ್ಕಕ್ಕಿಟ್ಟು ಮಿಶ್ರಣವನ್ನು ಆರಲು ಬಿಡಿ.
  • ಈಗ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಮೈದಾ, ಮೊಟ್ಟೆ ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿ.
  • ಹಿಟ್ಟು ಚೆನ್ನಾಗಿ ಮಿಶ್ರಣವಾದ ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಲಟ್ಟಣಿಗೆಯಿಂದ ರೋಲ್ ಮಾಡಿಕೊಳ್ಳಿ.
  • ಈಗ ಹಿಟ್ಟಿನ ಹಾಳೆಯ ಮೇಲೆ ಎರಡೆರಡು ಟೀಸ್ಪೂನ್ ಚಿಕನ್ ಮಿಶ್ರಣವನ್ನು ಹಾಕಿ, ಹಿಟ್ಟನ್ನು ಸಮೋಸ ಆಕಾರದಲ್ಲಿ ಮಡಚಿಕೊಳ್ಳಿ. ಎಲ್ಲಾ ಸ್ಟಫಿಂಗ್ಗಳನ್ನು ಹೀಗೇ ತಯಾರಿಸಿಕೊಳ್ಳಿ.
  • ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಸಮೋಸಗಳನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
  • ಸಮೋಸ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.
  • ಈಗ ಸಮೋಸಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    ಗರಿಯಾದ ಚಿಕನ್ ಸಮೋಸ ತಯಾರಾಗಿದ್ದು, ಸಾಸ್ ಅಥಾ ಗ್ರೀನ್ ಚಟ್ನಿಯೊಂದಿಗೆ ಸವಿಯಿರಿ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!